ಟೆನ್ನೋ ಹತ್ತು ವರ್ಷಗಳ ಕಾಲ ಝೆನ್ ಅಧ್ಯಯನ ಮಾಡಿದ ನಂತರ, ಝೆನ್ ಬೋಧಕ ಎಂಬ ಪಟ್ಟ ಪಡೆದ. ಒಂದು ದಿನ ಆತ ಪ್ರಸಿದ್ಧ ಝೆನ್ ಗುರು ನ್ಯಾನ್ – ಇನ್ ಭೇಟಿ ಮಾಡಲು ತೆರಳಿದ.
ಅವನನ್ನು ಸ್ವಾಗತಿಸಿದ ಗುರುಗಳು, ಪ್ರಶ್ನೆಯೊಂದನ್ನು ಕೇಳಿದರು.
`ನೀನು ಬರುವಾಗ ನಿನ್ನ ಮರದ ಚಪ್ಪಲಿ ಹಾಗೂ ಕೊಡೆಯನ್ನು ಹೊರಗಡೆ ಬಿಟ್ಟು ಬಂದೆಯಾ?¬
`ಹೌದು¬ ಎಂದು ಟೆನ್ನೋ ಉತ್ತರಿಸಿದ.
ಗುರು ಕೇಳಿದರು, `ಹಾಗಾದರೆ ಕೊಡೆ ಚಪ್ಪಲಿಯ ಬಲಗಡೆ ಇದೆಯೋ ಅಥವಾ ಎಡಗಡೆ ಇದೆಯೋ?¬
ಟೆನ್ನೋಗೆ ಉತ್ತರ ಗೊತ್ತಿರಲಿಲ್ಲ. ತನಗೆ ಇನ್ನೂ ಜ್ಞಾನೋದಯ ಪೂರ್ಣವಾಗಿಲ್ಲ ಎಂಬುದು ಅರ್ಥವಾಯಿತು. ನಂತರ ಆತ ಹಲವು ವರ್ಷಗಳವರೆಗೆ ನ್ಯಾನ್ – ಇನ್ ಬಳಿ ಅಧ್ಯಯನ ಮಾಡಿದ.