ದಾವಣಗೆರೆ, ಸೆ.3- ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ್ ಯುವ ಸೈನ್ಯದ ಜಿಲ್ಲಾ ಘಟಕವನ್ನು ಇತ್ತೀಚಿಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿ, ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ರಂಗನಾಥ್ ಸೇರಿದಂತೆ ಸಂಘಟನೆಗೆ ಆಯ್ಕೆ ಮಾಡಲಾದ ಜಿಲ್ಲಾಧ್ಯಕ್ಷ ಎಂ. ಹಾಲೇಶ್ ಬಸವನಾಳ್, ಉಪಾಧ್ಯಕ್ಷರುಗಳಾದ ಹಾಲೇಶ್ ತ್ಯಾವಣಗಿ, ಪ್ರಕಾಶ್ ಮಂಡಲೂರು, ಹನುಮಂತಪ್ಪ ಐಗೂರು, ಪ್ರಧಾನ ಕಾರ್ಯದರ್ಶಿ ಗುರುರಾಜ್, ಖಜಾಂಚಿ ಹೆಚ್. ನವೀನ್‌ಕುಮಾರ್, ಸಹ ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಫಕ್ಕೀರಪ್ಪ ಬಾತಿ, ಜಿಲ್ಲಾ ಸಂಚಾಲಕ ನಾಗರಾಜ್ ಶಾಮನೂರು, ನಿರ್ದೇಶಕರುಗಳಾದ ಪರಶುರಾಮ್, ತಿಪ್ಪೇಶ್, ಕೊಟ್ರೇಶ್, ಮಾರುತಿ, ರಘು, ಸುರೇಶ್ ಜಾಧವ್, ಪ್ರಶಾಂತ್, ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ಕಕ್ಕರಗೊಳ್ಳ ಇದ್ದರು.