ದಾವಣಗೆರೆ, ಡಿ.23- ಮಹಾರಾಷ್ಟ್ರದ ಅಮರಾವತಿಯ ಡಿವಿಷನಲ್ ಸ್ಪೋರ್ಟ್ಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ನಾಲ್ಕು ದಿನಗಳ 21ನೇ ಅಂತರರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಬೆಂಚ್ ಪ್ರೆಸ್ ಮತ್ತು ಡೆಡ್ ಲಿಫ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ಬೀರೇಶ್ವರ ವ್ಯಾಯಾಮ ಶಾಲೆಯ ಪವರ್ ಲಿಫ್ಟರ್ ಹಾಗೂ ಬಿ.ಎಸ್. ಚನ್ನಬಸಪ್ಪ ಪದವಿ ಕಾಲೇಜು ವಿದ್ಯಾರ್ಥಿನಿ ಸಿ. ದಿವ್ಯ 52 ಕೆ.ಜಿ. ವಿಭಾಗದಲ್ಲಿ ಸಬ್-ಜ್ಯೂನಿಯರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಒಟ್ಟು 235 ಕೆ.ಜಿ. ಭಾರವನ್ನು ಎತ್ತುವುದರ ಮೂಲಕ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ದಿವ್ಯ, ರಾಷ್ಟ್ರೀಯ ಪವರ್ ಲಿಫ್ಟರ್ ಕೆ. ಚಂದ್ರಪ್ಪ ಹಾಗೂ ರಾಜೇಶ್ವರಿ ಅವರ ಪುತ್ರಿ.