ದಾವಣಗೆರೆ,ಡಿ.20-ನಗರದ ಬಾಪೂಜಿ ದಂತ ಕಾಲೇಜು ಮತ್ತು ಆಸ್ಪತ್ರೆಯ ನಿರ್ದೇಶಕ ಡಾ. ಕೆ. ಸದಾಶಿವ ಶೆಟ್ಟಿ, ಡಾ. ದೀಪ್ತಿ ಶಿರಿ ಅಮನ್ನ, ಡಾ. ಮೊಹಮ್ಮದ್ ಜೊಹೆಬ್ ಅವರುಗಳು ರಚಿಸಿರುವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಪುಸ್ತಕವು ಸ್ನಾತಕೋತ್ತರ ಪದವೀಧರರಿಗೆ, ಆರ್ಥೊಡಾಂಟಿಕ್ ನಿವಾಸಿ ವೈದ್ಯರು, ಶಿಕ್ಷಣ ತಜ್ಞರು ಮತ್ತು ಸಂಶೋಧಕರಿಗೆ ಬಹಳ ಉಪಯುಕ್ತವಾಗಿರುವ ಈ ಪುಸ್ತಕವನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ ಅವರುಗಳು ಲೋಕಾರ್ಪಣೆ ಮಾಡಿದರು.
`ಎ ಕೇಸ್ – ಬೇಸ್ಡ್ ಅಟ್ಲಾಸ್ ಆಫ್ ಕಾಂಪ್ರಹೆನ್ಸಿವ್ ಆರ್ಥೊಡಾಂಟಿಕ್ಸ್’ ಪುಸ್ತಕವನ್ನು ಆಸ್ಪತ್ರೆಯ ಆರ್ಥೊಡಾಂಟಿಕ್ಸ್ ವಿಭಾಗದಲ್ಲಿ ಮೊನ್ನೆ ನಡೆದ ಸರಳ ಸಮಾರಂಭದಲ್ಲಿ ಡಾ. ಶಾಮನೂರು ಶಿವಶಂಕರಪ್ಪ ಅವರು ಬಿಡುಗಡೆ ಮಾಡಿ, ಡಾ. ಸದಾಶಿವ ಶೆಟ್ಟಿ ಮತ್ತು ಇತರರಿಗೆ ಶುಭ ಹಾರೈಸಿದರು.