ನಿವೃತ್ತರ ಮನೆಗೆ ಜೀವಿತ ಪ್ರಮಾಣ ಪತ್ರ

ದಾವಣಗೆರೆ, ಜ. 27 – ನಿವೃತ್ತ ನೌಕರರಿಗೆ ಜೀವಿತ ಪ್ರಮಾಣ ಪತ್ರವನ್ನು ಅವರ ಮನೆ ಬಾಗಿಲಿಗೆ ತಲುಪಿ ಸುವ ಕಾರ್ಯವನ್ನು ಅಂಚೆ ಇಲಾಖೆ ಆರಂಭಿಸಿದೆ.

ಅಂಚೆ ಇಲಾಖೆಯ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಮೂಲಕ ಅಂಚೆ ಸಿಬ್ಬಂದಿ ಮನೆ ಬಾಗಿಲಿಗೆ ಜೀವಿತ ಪ್ರಮಾಣ ಪತ್ರವನ್ನು ಮೈಕ್ರೋ ಎ.ಟಿ.ಎಂ. ಮೂಲಕ ವಿತರಿಸುತ್ತಿದ್ದಾರೆ. ಇದರಿಂದಾಗಿ ಪಿಂಚಣಿದಾರರು ಬ್ಯಾಂಕ್ ಎದುರು ಸರದಿಯಲ್ಲಿ ನಿಂತು ಫಾರಂ ಭರ್ತಿ ಮಾಡಿ ಜೀವಿತ ಪ್ರಮಾಣ ಪತ್ರ ಪಡೆಯಲು ಪಡುತ್ತಿದ್ದ ಕಷ್ಟ ತಪ್ಪುತ್ತದೆ ಎಂದು ಚಿತ್ರದುರ್ಗ ಅಂಚೆ ಅಧೀಕ್ಷಕ ವಿರುಪಾಕ್ಷಪ್ಪ ತಿಳಿಸಿದ್ದಾರೆ.

ಅಂಚೆ ಇಲಾಖೆಯ ವಿಶಾಲವಾದ ಜಾಲ ವ್ಯವಸ್ಥೆ ಮತ್ತು ಎಲ್ಲೆಡೆ ತಲುಪುವ ಪೋಸ್ಟ್‌ಮೆನ್‌ಗಳು ಬಯೋಮೆಟ್ರಿಕ್ ಮೂಲಕ ಹೆಬ್ಬೆಟ್ಟಿನ ಮಾದರಿ ಸಂಗ್ರಹಿಸಿ ಖಾತೆ ಲಿಂಕ್ ಮಾಡುತ್ತಾರೆ. ನಂತರ ಡಿಜಿಟಲ್ ಪ್ರಮಾಣ ಪತ್ರವನ್ನು ಬ್ಯಾಂಕಿಗೆ ಕಳಿಸಲಾಗುತ್ತದೆ. ಈ ಪ್ರಕ್ರಿಯೆಗೆ 70 ರೂ.ಗಳ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಪ್ರದೇಶದ ಪೋಸ್ಟ್‌ಮೆನ್‌ಗಳ ಮೂಲಕ ಪಡೆಯಬಹುದಾಗಿದೆ ಎಂದು ವಿರೂಪಾಕ್ಷಪ್ಪ ತಿಳಿಸಿದ್ದಾರೆ.

error: Content is protected !!