ದಾವಣಗೆರೆ, ಅ.27- ನಗರದ ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ `ರೋಲ್ ಆಫ್ ಎಲೆಕ್ಟ್ರಿಕಲ್ ಮಷಿನ್ಸ್ ಇನ್ ನ್ಯೂವ್ ಮಿಲ್ಲೇನಿಯಂ’ ವಿಷಯದ ಕುರಿತು ತಜ್ಞರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು.
ತುಮಕೂರಿನ ಸಿಮಿಕ್ ಇಂಡಸ್ಟ್ರೀಸ್ನ ಜನರಲ್ ಮ್ಯಾನೇಜರ್ ಸುನೀಲ್ ನಾಯ್ಕ್ ಅವರು ವಿಷಯದ ಕುರಿತು ಉಪನ್ಯಾಸ ನಡೆಸಿಕೊಟ್ಟರು. ಬೆಂಗಳೂರಿನ ಆರ್.ಎ.ಕೆ. ಅನಾಲಿಟಿಕ್ಸ್ನ ಪ್ರೊ. ಕೃಷ್ಣನ್ ಅವರು ಮಾತನಾಡಿದರು.
ಜಿ.ಎಂ.ಐ.ಟಿ ನಿರ್ದೇಶಕರು ಮತ್ತು ಆಡಳಿತ ಮಂಡಳಿ ಸದಸ್ಯರಾದ ಡಾ. ಕೆ. ದಿವ್ಯಾನಂದ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ. ವೈ.ವಿಜಯಕುಮಾರ್, ಕಾರ್ಯಕ್ರಮದ ಸಂಚಾಲಕ ಡಾ. ಎಂ.ಬಿ. ಸಂಜಯ ಪಾಂಡೆ, ಜಿ.ಎಂ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಬಾಳೆಕಾಯಿ, ಡಾ. ಬಿ.ಎಸ್. ಸುನೀಲ್ ಕುಮಾರ್, ರುದ್ರಯ್ಯ , ಡಾ. ಹಾದಿಮನಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾದ ಡಾ. ಮೌನೇಶಚಾರಿ ಎಸ್ ಮತ್ತು ಮಾರುತಿ ಎಸ್.ಟಿ. ಅವರು ನಿರೂಪಿಸಿದರು.