ದಾವಣಗೆರೆ, ಏ.27- ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬಡವರು ಮತ್ತು ಕಲಾವಿದರು ಹಾಗೂ ಪತ್ರಿಕಾ ವಿತರಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿತರಿಸಿದರು. ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಕಾಡಜ್ಜಿ ಮಂಜುನಾಥ್, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಕೋಶಾಧಿಕಾರಿ ರವಿಕುಮಾರ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ತಿಮ್ಮೇಶ್, ಪತ್ರಿಕಾ ವಿತರಕರಾದ ಕೃಷ್ಣಮೂರ್ತಿ, ಮುದ್ದಪ್ಪ, ವೇದಿಕೆ ನಗರ ಘಟಕ ಉಪಾಧ್ಯಕ್ಷರಾದ ಸಂತೋಷ್, ಸತ್ಯನಾರಾಯಣ, ಉದ್ದಿಮೆದಾರರ ಘಟಕದ ಅಧ್ಯಕ್ಷ ಶ್ರೀನಿವಾಸ್ ಚಿನ್ನಿಕಟ್ಟಿ, ಉಪಾಧ್ಯಕ್ಷ ಮಹೇಶ್ವರಪ್ಪ, ಕಾರ್ಯದರ್ಶಿ ಕೋಮಲ್ ಜೈನ್, ಯುವ ಘಟಕದ ಜಿಲ್ಲಾ ಸಂಚಾಲಕ ಮಜಾಹಿದ್, ಪಾದಚಾರಿ ಘಟಕದ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.
ರಾಘವೇಂದ್ರ, ತುಳಸಿರಾಮ್, ಕಲಾಲ್ ಚೌಧರಿ, ಕರಿಬಸವರಾಜ್, ಚಂದ್ರು, ಮಂಜುನಾಥ್, ವೀರೇಂದ್ರ, ಧೀರೇಂದ್ರ, ಕೆ.ಜಿ. ಬಸವರಾಜ್, ಆವರಗೆರೆ ಬಸವರಾಜ್, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಧರ್ಮರಾಜ್, ಸುನೀಲ್, ಅಭಿ, ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಉಪಾಧ್ಯಕ್ಷರಾದ ಮಂಜುಳಾ, ಮಾಂತೇಶ್, ಕಾರ್ಯದರ್ಶಿ ಮಂಜುಳಮ್ಮ, ಶಾಂತಮ್ಮ, ದುಗ್ಗಮ್ಮ, ರೇಖಾ ಹಾಗು ಇನ್ನಿತರರಿದ್ದರು.
December 24, 2024