ಶ್ರೀಶೈಲ, ಮಾ. 14 – ಜಗದ್ಗುರು ಸೂರ್ಯ ಸಿಂಹಾನಾಧೀಶ್ವರ ಶ್ರೀ 1008 ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಭಗವತ್ಪಾದಂಗಳವರ ಅಡ್ಡಪಲ್ಲಕ್ಕಿ ಮಹೋತ್ಸವವು ಶ್ರೀ ಶೈಲ ಪುಣ್ಯಕ್ಷೇತ್ರದಲ್ಲಿ ಜರುಗಿತು.
ಅಡ್ಡಪಲ್ಲಕ್ಕಿ ಉತ್ಸವವು ಪ್ರತಿ ವರ್ಷದ ಪದ್ಧತಿಯಂತೆ ಶಿವರಾತ್ರಿ ಪ್ರಯುಕ್ತ ಶ್ರೀ ಬಯಲು ವೀರಭದ್ರಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ರಾಜಬೀದಿಯ ಮುಖಾಂತರ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದವರೆಗೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಗಳು, ಉಭಯ ದೇವಸ್ಥಾನದ ಪ್ರಧಾನ ಅರ್ಚಕರು ಪೂರ್ಣ ಕುಂಭದೊಂದಿಗೆ ಅಡ್ಡಪಲ್ಲಕ್ಕಿ ಸ್ವಾಗತಿಸಿದರು. ಈ ಸಮಯದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು.
ಎಂ.ಎಸ್. ಬಸವರಾಜ ಸ್ವಾಮಿ, ಮಂಜುನಾಥ ಸ್ವಾಮಿ, ಅಮರೇಗೌಡ, ಎಂ. ಬನ್ನಯ್ಯ ಸ್ವಾಮಿ, ಎಸ್. ಮಲ್ಲಪ್ಪ, ಮುತ್ತಯ್ಯ ಸ್ವಾಮಿ, ವಿಶ್ವನಾಥ ಸ್ವಾಮಿ, ಸಿದ್ದು, ಎಂ.ಎಸ್. ನಾಗರಾಜ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.