ಉಕ್ಕಡಗಾತ್ರಿ ಅಜ್ಜಯ್ಯನ ಗರ್ಭಗುಡಿಗೆ ಹಿತ್ತಾಳೆ ಕವಚ ಅಳವಡಿಕೆ

ಅಜ್ಜಯ್ಯನ ಜಾತ್ರೆಗೆ ಸಿದ್ಧತೆ

ಮಲೇಬೆನ್ನೂರು, ಮಾ.10- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಇದೇ ಮಾರ್ಚ್ 13 ರಿಂದ 20 ರವರೆಗೆ ಜರುಗಲಿದೆ.

ಈ ಬಾರಿ ವಿಶೇಷವಾಗಿ ಅಜ್ಜಯ್ಯನ ಗದ್ದುಗೆ ಇರುವ ಗರ್ಭ ಗುಡಿಯ ಗೋಡೆಗಳಿಗೆ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಹಿತ್ತಾಳೆ ಕವಚವನ್ನು ಅಳವಡಿಸಲಾಗಿದೆ. ಕವಚ ತುಂಬಾ ಆಕರ್ಷಣೀಯ ವಾಗಿದೆ  ಎಂದು ಗದ್ದುಗೆ ಟ್ರಸ್ಟ್ ಸಮಿತಿ ಕಾರ್ಯ ದರ್ಶಿ ಸುರೇಶ್ ತಿಳಿಸಿದ್ದಾರೆ. 

ಕೋವಿಡ್ ಕಾರಣದಿಂದಾಗಿ ಈ ವರ್ಷ ಜಾತ್ರೆಯನ್ನು ಸರಳವಾಗಿ ಹಮ್ಮಿಕೊಂಡಿದ್ದು, 60 ವರ್ಷ ಮೇಲ್ಪಟ್ಟವರನ್ನು ಹಾಗೂ 10 ವರ್ಷದೊಳಗಿನ ಮಕ್ಕಳನ್ನು ಜಾತ್ರೆಗೆ ಕರೆ ತರಬಾರದೆಂದು ಸುರೇಶ್ ಮನವಿ ಮಾಡಿದ್ದಾರೆ.

ಜಾತ್ರೆಗೆ ಅಗತ್ಯ ಸಿದ್ಧತೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲಾಗಿದೆ. ಗ್ರಾ.ಪಂ.ನಿಂದ ಸ್ವಚ್ಛತಾ ಕಾರ್ಯ ನಡೆದಿದ್ದು, ಆರೋಗ್ಯ ಇಲಾಖೆಯಿಂದಲೂ ಮುನ್ನೆಚ್ಚರಿಯನ್ನು ಕೈಗೊಳ್ಳಲಾಗಿದೆ.

error: Content is protected !!