ದಾವಣಗೆರೆ, ಏ. 14- ದಲಿತರು ಸೇರಿದಂತೆ ಎಲ್ಲಾ ಸಮುದಾಯದ ಬಡ ವರು ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಿ ದಾಗ ಮಾತ್ರ ಡಾ. ಬಿ.ಆರ್. ಅಂಬೇ ಡ್ಕರ್ ಜಯಂತಿಗೆ ಅರ್ಥ ಬರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್ ಬಸವಂತಪ್ಪ ಪ್ರತಿಪಾದಿಸಿದರು.
ಸಮೀಪದ ಕಂದನಕೋವಿ ಗ್ರಾಮದಲ್ಲಿ ನಡೆದ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯಲ್ಲಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮುದಾಯದ ಎಲ್ಲಾ ಶೋಷಿ ತರ ಪರವಾಗಿ ಕೆಲಸ ಮಾಡಿದ್ದಾರೆ. ಶಿಕ್ಷಣವೇ ಶೋಷಣೆಯನ್ನು ತಡೆಯುವ ಅಸ್ತ್ರ ಎಂಬುದು ಅವರ ಅಭಿಮತವಾಗಿತ್ತು. ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಮತದಾನದ ಹಕ್ಕು ದೊರಕಿಸಲು ಅಂಬೇಡ್ಕರ್ ನಿರಂತರ ಶ್ರಮಿಸಿದರು. ವಿಶ್ವ ಮಾನವರಾದ ಅವರನ್ನು ಕೇವಲ ಜಾತಿಗೆ ಸೀಮಿತಗೊಳಿಸಬಾರದು. ಸಮಾನತೆ ಗಾಗಿ ಬದುಕನ್ನು ಸವೆಸಿದ ಅವರ ಬದುಕು ವಿಶ್ವಕ್ಕೆ ಆದರ್ಶಪ್ರಾಯವಾಗಿದೆ. ಗ್ರಾಮದಲ್ಲಿ ಸಾಮರಸ್ಯ ಶಾಂತಿ ಕಾಪಾಡಿಕೊಂಡು ಸಹಬಾಳ್ವೆಯಿಂದ ಬದುಕಿ, ಅಂಬೇಡ್ಕರವರಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಜ್ಯೋತಿ ಬಾಪುಲೆ ಮಹಿಳಾ ಸ್ವಸಹಾಯ ಸಂಘ ಅಂಬೇಡ್ಕರ್ ಯುವಕ ಸಂಘ ಉದ್ಘಾಟಿಸಲಾಯಿತು.
ಗ್ರಾ.ಪಂ. ಅಧ್ಯಕ್ಷರಾದ ಗಾಯತ್ರಿ ಮುನಿಯಾ ನಾಯ್ಕ್ ಮಾಜಿ ಅಧ್ಯಕ್ಷ ಕೆಂಚವೀರಪ್ಪ ಸದಸ್ಯರಾದ ಕರಿಬಸಪ್ಪ ನೇತ್ರಮ್ಮ ಮುಖಂಡರಾದ ಸಿದ್ದನೂರು ಪ್ರಕಾಶ್, ಬಸವರಾಜಪ್ಪ, ದ್ಯಾಮಣ್ಣ, ಮಹೇಶಪ್ಪ, ಸಿದ್ಧಪ್ಪ ತಿಪ್ಪೇಸ್ವಾಮಿ, ಬಸವರಾಜ್, ರವಿ ಮತ್ತಿತರರಿದ್ದರು.