ಕೊಟ್ಟೂರು, ಫೆ.4- ಕೊಟ್ಟೂರು ತಾಲ್ಲೂಕು ಚಿರಿಬಿ ಗ್ರಾಮ ಪಂಚಾ ಯಿತಿಯ ಅಧ್ಯಕ್ಷರಾಗಿ ಬಿಜೆಪಿಯ ದೇವೀರಮ್ಮ ಬೂದಿ ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಂ. ಚಿನ್ಮಯಾನಂದಸ್ವಾಮಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ. ಚನ್ನಬಸವನಗೌಡ್ರು, ಮುಖಂಡರಾದ ಭೀಮಣ್ಣ ಕೂಡ್ಲಿಗಿ, ತಾ.ಪಂ. ಅಧ್ಯಕ್ಷರಾದ ಗುರುಮೂರ್ತಿ, ಪಿ. ನಾಗರಾಜ, ಕೆ. ಅವಿನಾಶ್ ಮತ್ತಿತರರಿದ್ದರು.