ಎಲೆಬೇತೂರಿನಲ್ಲಿ ಪೋಲಿಯೋ ಕಾರ್ಯಕ್ರಮ

ದಾವಣಗೆರೆ, ಫೆ.1 – ತಾಲ್ಲೂಕಿನ ಎಲೆಬೇತೂರು ಗ್ರ್ರಾಮದ ಉಪಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಿತು.

ಕಕ್ಕರಗೊಳ್ಳ ಜಿ.ಪಂ. ಸದಸ್ಯರಾದ ಶ್ರೀಮತಿ ರೇಣುಕಾ ಕರಿಬಸಪ್ಪ ಮಗುವಿಗೆ ಪೋಲಿಯೋ ಹನಿ ಹಾಕಿ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ|| ಆಶಾ ಭಾನುಪ್ರಕಾಶ್ ಮಾತನಾಡಿದರು. 

ತಾ.ಪಂ. ಸದಸ್ಯರಾದ ಬಿ.ಜಿ. ಸಂಗನಗೌಡ್ರು, ಗ್ರಾ.ಪಂ. ಶ್ರೀಮತಿ ಜಯಮ್ಮ ಬಸವರಾಜಯ್ಯ, ತಾಲ್ಲೂಕು ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ, ಬೇತೂರು ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಮಿಲ್ಕಾ ಡಿ, ಪಲ್ಸ್ ಪೋಲಿಯೋ ಮೇಲ್ವಿಚಾರಕರಾದ ಶಿವಶಂಕರ್, ಕಿರಣ್‌ಕುಮಾರ್, ಆಶಾ ಕಾರ್ಯಕರ್ತೆಯರಾದ ಸಿದ್ದಮ್ಮ, ರೂಪಾ, ಸುಜಾತಾ ಮತ್ತಿತರರು 
ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!