ಹರಿಹರ ಸರ್ಕಾರಿ ನೌಕರರ ಸಂಘದಿಂದ 2022ರ ಕ್ಯಾಲೆಂಡರ್ ಬಿಡುಗಡೆ

ಹರಿಹರ, ಫೆ. 9 – ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಪ್ರಕಟಿಸಿರುವ 2022ನೇ ಸಾಲಿನ ಕ್ಯಾಲೆಂಡರನ್ನು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಲೋಕಾರ್ಪಣೆ ಮಾಡಿದರು.

ತಾಲ್ಲೂಕು ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಹರಿಹರೇಶ್ವರ ದೇವಾಲಯ, ಬಸಿಲಿಕಾ ಖ್ಯಾತಿಯ ಆರೋಗ್ಯ ಮಾತೆ ಚರ್ಚ್, ಪುರಾತನ ಹಳ್ಳದಕೇರಿಯ ಜಾಮಿಯಾ ಮಸೀದಿ ಸೇರಿದಂತೆ ತಾಲ್ಲೂಕಿನ ಪ್ರಮುಖ ಸ್ಥಳಗಳ ಮಾಹಿತಿ ಇದರಲ್ಲಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ, ಬಿಇಒ ಬಿ.ಸಿ.ಸಿದ್ದಪ್ಪ, ಎಡಿಎಲ್‍ಆರ್ ಕಸ್ತೂರಿ, ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ, ರಾಜ್ಯ ಪರಿಷತ್ ಸದಸ್ಯ ರಂಗನಾಥ್, ತಾಲ್ಲೂಕು ಕಾರ್ಯದರ್ಶಿ ಡಿ.ಟಿ.ಮಂಜಪ್ಪ, ಖಜಾಂಚಿ ಶಿವಮೂರ್ತಿ, ಪದಾಧಿಕಾರಿಗಳಾದ ವಿಜಯ ಮಹಾಂತೇಶ್, ಎ.ಕೆ.ಭೂಮೇಶ್, ಎಂ.ಉಮ್ಮಣ್ಣ, ವಿಜಯ ಪ್ರಕಾಶ್, ಪ್ರಕಾಶ್, ತುಕಾರಾಮ್, ಕೃಷ್ಣಪ್ಪ ಭಜಂತ್ರಿ, ಸಂತೋಷ್ ಕುಮಾರ್, ಎಂ.ಬಿ.ಮಂಜುನಾಥ್, ಅಕ್ಷಯ ಕುಮಾರ್, ಜಿ.ಆರ್.ಕಲ್ಲಪ್ಪ, ಮುಷ್ತಾಖ್ ಅಹ್ಮದ್, ಯಶೋದಮ್ಮ, ಶಿವಬಸು ಮತ್ತಿತರರು ಉಪಸ್ಥಿತರಿದ್ದರು.

error: Content is protected !!