ಮರ್ಯಾದಾ ಪುರುಷೋತ್ತಮ

ಏನ್ ಸವಿ ಏನ್ ಸವಿ ರಾಮ ನಾಮ
ಪಾಯಸದಂತೆ ಸವಿ ನಾಮ |
ಅಯೋಧ್ಯೆಯಲ್ಲಿ ಭೂಮಿ ಪೂಜೆ
ಭಾರತೀಯತೆಯನ್ನು ಎತ್ತಿ ಹಿಡಿದ ಧ್ವಜೆ ||

ಬೆಳಗಿತು ಹಿಂದುತ್ವದ ಶ್ರೇಷ್ಠ ಹಣತೆ |
ಅಯೋಧ್ಯೆಯೆಂಬ ಪವಿತ್ರತೆ
ಅಣು ಅಣುವಿನಲ್ಲೂ ರಾಮನವತಾರ
ಹಿಂದೂಗಳಿಗೆ ಸಿಕ್ಕ ಪುರಸ್ಕಾರ |

ಹಿಂದೂಗಳ ಕನಸು ನನಸಾಯ್ತು
ಬೆಳ್ಳಿ ಇಟ್ಟಿಗೆಯಿಂದ ಶಿಲಾನ್ಯಾಸವಾಯ್ತು
ಮೋದೀಜಿಯವರಿಂದ ಶಂಖುಸ್ಥಾಪನೆ
ಬಹು ಜನರ ಹೋರಾಟಕ್ಕೆ ಹಸಿರು ನಿಶಾನೆ ||
ಸರಯೂ ನದೀ ತೀರದ ಈ ನಗರ |

ರಾಮ ಜನ್ಮಭೂಮಿ ಪುಣ್ಯದಾಗರ ||
366 ಸ್ಥಂಭಗಳ ಆಲಯ |
ಒಂದೊಂದು ಸ್ಥಂಭದಲ್ಲೂ ರಾಮ ವಿಗ್ರಹಾಲಯ ||
ಮರ್ಯಾದಾ ಪುರುಷೋತ್ತಮ ರಾಮನಂತೆ |
ದಶರಥ ರಾಜನ ಪುತ್ರನಂತೆ ||

ಹಿಂದೂಗಳ ಆರಾಧ್ಯ ದೈವವಂತೆ |
ನೆಲೆ ನಿಂತ ಸ್ಥಳವು ಅಯೋಧ್ಯೆಯಂತೆ ||
ಮನವು ಪ್ರಫುಲ್ಲ ಈ ನಾಮದಿಂದ
ಜಡ ಚೇತನಕೆ ನಲವಿದರಿಂದ
ಕ್ಷಣ ಕ್ಷಣಕ್ಕೂ ರಾಮನಾಮ ಜಪಿಸು
ದೊರೆವುದು ಅಪಾರ ಪ್ರೇಮ ಪನ್ನೀರು ||

ಹಿಂದೂಗಳ ಪಾಲಿಗೆ ಜಯವಿಹುದು |
ಹಿಂದೂಗಳ ಶ್ರಮದ ವಿಜಯವಿದು ||
ಭಾರತೀಯರ ಪಾಲಿಗೆ ಇದೊಂದು ವರ |
ಅಯೋಧ್ಯೆಯೆಂಬ ಸುಂದರ ನಗರ ||


ಕೋಮಲ ವಸಂತ್ ಕುಮಾರ್
ದಾವಣಗೆರೆ.

error: Content is protected !!