ಪ್ರಕೃತಿ ರಕ್ಷಕಿ- ಶಿಕ್ಷಕಿ

ಸರ್ವವು ಅಡಗಿದೆ ಕಾಲಗರ್ಭದಲಿ
ಕಾಣರಾರು ಮಹಿಮಾ ಅದರಲಿ
ಕಾಲಚಕ್ರದ ಏರಿಳಿತದ ನಿಯಮಕೆ
ಬಾಗಬೇಕಿತ್ತೆಲ್ಲರೂ ರೀತಿ- ನೀತಿಗೆ.

ಅತ್ಯಾಸೆಯ ವೇಗದ ಓಟಕ್ಕೆ
ಅರಿಯಲೇಬೇಕಿತ್ತು ಪರಿಣಾಮಕ್ಕೆ
ಅಳಿಸಲು ಹೋದರೆ ವಿಧಿ ಬರಹ
ಅನುಭವಿಸಲೇ ಬೇಕು ತರತರಹ.

ಮಗ್ಗುಲಾಗಿಹುದು ಬದುಕಿಂದು
ಅರ್ಥ ಕಳೆದುಕೊಂಡಿಹ ಬಾಳಿಂದು
ತಂತ್ರ ಕುತಂತ್ರದಲಿ ಮಾಡಿದ ಅಡುಗೆ
ಮಾಡಿದ್ದುಣ್ಣೋ ಎಲ್ಲವೂ ನೀ ನಿಂದು.

ಬಿತ್ತಿದ ಫಲವದು ಕರ ಕರದಲ್ಲಿ
ಮಕ್ಕಳೆಲ್ಲರ ಭವಿಷ್ಯ ಮಸುಕಲ್ಲಿ
ಅಂಕ ಅಂಕಕ್ಕಿತ್ತು ಜಿದ್ದಿನ ಹೋರಾಟ
ಕೊರೊನಾ ಕಲಿಸಿತೆ ಬಾಳಿಗೆ ಪಾಠ!!

ಆತಂಕ ಸರಿಸಿ ಕಲಿಯಿರಿ ಮಕ್ಕಳೇ
ಸಂಸ್ಕೃತಿ, ಸಂಸ್ಕಾರ, ನೀತಿ ಪಾಠವನು
ಓದು-ಬರಹ ಜೊತೆ ಜೊತೆಗಿರಲೆಂದು
ಭವಿಷ್ಯದ ಪ್ರಜೆಗಳು ನೀವೇ ಅಲ್ಲವೇ?


ವೀಣಾ ಕೃಷ್ಣಮೂರ್ತಿ
ದಾವಣಗೆರೆ.

error: Content is protected !!