ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಉಪಾಧ್ಯಕ್ಷರಾಗಿ ಜಂಬಿಗಿ

ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಉಪಾಧ್ಯಕ್ಷರಾಗಿ ಜಂಬಿಗಿ - Janathavaniದಾವಣಗೆರೆ, ಡಿ. 3- ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಉಪಾಧ್ಯಕ್ಷರಾಗಿ ನಗರದ ಹಿರಿಯ ತೆರಿಗೆ ಸಲಹೆಗಾರರಾದ ಜಂಬಿಗಿ ರಾಧೇಶ್ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘಕ್ಕೆ ದೊಡ್ಡಬಳ್ಳಾಪುರದಲ್ಲಿ ಮೊನ್ನೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ರಾಧೇಶ್ ಅವರು ಅತ್ಯಧಿಕ ಮತಗಳನ್ನು ಗಳಿಸಿ ಚುನಾಯಿತರಾದರು. 

ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ ಎಸ್. ನಂಜುಂಡಪ್ರಸಾದ್, ಮೈಸೂರು ವಲಯಕ್ಕೆ ಟಿ.ಪಿ. ಪ್ರಕಾಶ್ (ಉಪಾಧ್ಯಕ್ಷ),  ಮುಕುಂದ ಪೋತ್ನೀಸ್ (ಪ್ರಧಾನ ಕಾರ್ಯದರ್ಶಿ), ಸೋಮಲಿಂಗಪ್ಪ ಸೋಲಾರಗುಪ್ಪ (ಖಜಾಂಚಿ), ಕೆ.ಸಿ ಆನಂದ್ (ರಾಜ್ಯ ಜಂಟಿ ಕಾರ್ಯದರ್ಶಿ), ಬೆಳಗಾವಿ ಹಾಗೂ ಕಲಬುರ್ಗಿ ವಲಯಕ್ಕೆ ಉಪಾಧ್ಯಕ್ಷರಾಗಿ ಪ್ರಶಾಂತ್ ವಿ. ಹಂಚಾಟೆ, ಪ್ರಶಾಂತ್ ಚಿಟಿಗೇಪರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!