ದಾವಣಗೆರೆ, ಮಾ. 24 – ಜಿಲ್ಲಾ ಅಮಚೂರ್ ಕಬ್ಬಡಿ ಸಂಸ್ಥೆ ಆಶ್ರಯದಲ್ಲಿ ನಡೆದ ಉದಯೋನ್ಮುಖ ಕಬಡ್ಡಿ ಕ್ರೀಡಾಪಟು ಚಂದ್ರಾನಾಯ್ಕ್ ರಾಷ್ಟ್ರಮಟ್ಟದ ಜೂನಿಯರ್ ಚಾಂಪಿಯನ್ ಶಿಪ್‌ನಲ್ಲಿ ದಾವಣಗೆರೆಯಿಂದ ಪ್ರತಿನಿಧಿಸುತ್ತಿದ್ದಾರೆ. ತೆಲಂಗಾಣದ ಸೂರ್ಯಂ ಪೇಟ್‌ನಲ್ಲಿ ನಡೆಯಲಿರುವ 47ನೇ ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ತಂಡದಲ್ಲಿ ಕರ್ನಾಟಕದಿಂದ ಭರವಸೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ. ನಾರಾಯ ಣಸ್ವಾಮಿ, ಜಿಲ್ಲಾಧ್ಯಕ್ಷರಾದ ಎಂ.ನಾಗರಾಜ್, ಅಮೆಚೂರ್ ಕಬಡ್ಡಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
January 24, 2025