ಹೊನ್ನಾಳಿ ವಾಲ್ಮೀಕಿ ಸಮಾಜದ ಅಧ್ಯಕ್ಷರಾಗಿ ಕುಳಗಟ್ಟಿ ರಂಗಪ್ಪ ಆಯ್ಕೆ

ಹೊನ್ನಾಳಿ, ಮಾ.14- ವಾಲ್ಮೀಕಿ ನಾಯಕ ಸಮಾಜದ ಹೊನ್ನಾಳಿ ತಾಲ್ಲೂಕು ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕುಳಗಟ್ಟಿ ಕೆ.ಎಲ್.ರಂಗನಾಥ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಾಲ್ಮೀಕಿ ಸಮುದಾಯ ಭವನ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಬೇಲಿಮಲ್ಲೂರು ಶಿವಾನಂದಪ್ಪ ಇವರನ್ನು ಆಯ್ಕೆ ಮಾಡಲಾಯಿತು.

ಪಟ್ಟಣದ ಸುಂಕದಕಟ್ಟಿ ರಸ್ತೆಯ ವಾಲ್ಮೀಕಿ ಸಮುದಾಯ ಭವನದಲ್ಲಿ ಕೋಣನತಲೆ ನಾಗಪ್ಪ ಇವರ ಅಧ್ಯಕ್ಷತೆಯಲ್ಲಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಕರೆಯಲಾಗಿತ್ತು. ಸಮಾಜದ ಹಿರಿಯರಾದ ನಿಕಟ ಪೂರ್ವ ಅಧ್ಯಕ್ಷ ತಿಮ್ಮೇನಹಳ್ಳಿ ಚಂದಪ್ಪ, ಮಾರಿಕೊಪ್ಪ ತಿಮ್ಮಪ್ಪ, ಹೊನ್ನಾಳಿ ಹನುಮಂತ, ಚಂದ್ರಪ್ಪ, ಕುಳಗಟ್ಟಿ ಜಗ್ಗಣ್ಣ, ಗಂಡುಗಲಿ ಮಂಜಪ್ಪ ಇವರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಸಮಾಜದ ಗೌರವ ಅಧ್ಯಕ್ಷರಾಗಿ ತಿಮ್ಮೇನಹಳ್ಳಿ ಚಂದಪ್ಪ, ಉಪಾಧ್ಯಕ್ಷರಾಗಿ ಕ್ಯಾಸಿನಕೆರೆ ಶೇಖರಪ್ಪ, ಸೊರಟೂರು ಬಸವರಾಜ್, ಕುಳಗಟ್ಟಿ ಹನುಮಂತ, ನೇರಲಗುಂಡಿ ಕುಬೇರಪ್ಪ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಹಿರೇಬಾಸೂರು ಹನುಮಂತಪ್ಪ ಖಜಾಂಚಿ ಕೋಣನತಲೆ ರವಿಕುಮಾರ, ಸಂಘಟನಾ ಕಾ.ನೆಲಹೊನ್ನೆ  ಪ್ರಕಾಶ್, ಹೊನ್ನಾಳಿ ಶಿವಕುಮಾರ್ ಸಹ.ಕಾ. ಹೊನ್ನಾಳಿ ರಾಜೇಂದ್ರ, ಕಮ್ಮಾರಗಟ್ಟಿ ಗಂಗಾಧರ್, ನಿರ್ದೇಶಕರುಗಳಾಗಿ ಹುಣುಸಗಟ್ಟ ರಾಜಪ್ಪ, ತ್ಯಾಗದಕಟ್ಟಿ ಮಂಜಪ್ಪ, ಹರಗನಹಳ್ಳಿ ಹನುಮಂತ, ಬೇಲಿಮಲ್ಲೂರು ಅಣ್ಣಪ್ಪ, ಬಲಮುರಿ ಹಳದಪ್ಪ, ಹೊಳೆಹರಳಹಳ್ಳಿ ನಾಗರಾಜ್, ದಿಡಗೂರು ಧರ್ಮಪ್ಪ, ಗೋಣಿಗೆರೆ ರಾಮಗೌಡ ಇವರನ್ನು ಆಯ್ಕೆ ಮಾಡಲಾಯಿತು. ಸಮುದಾಯ ಭವನ ನಿರ್ವಹಣಾ ಸಮಿತಿ ಗೌರವ ಅಧ್ಯಕ್ಷರಾಗಿ ಎನ್.ನಾಗಪ್ಪ, ಕಾರ್ಯದರ್ಶಿ ಹನುಮಂತ್‌, ಖಜಾಂಚಿ ಚಂದ್ರಪ್ಪ, ಸದಸ್ಯರಾಗಿ ಕತ್ತಿಗೆ ಬಸವರಾಜ್, ಮಾರಿಕೊಪ್ಪ ತಿಮ್ಮಪ್ಪ, ಹೊನ್ನಾಳಿ ನಾರಾಯಣ, ಹಿರೇಗೋಣಿಗೆರೆ ಚಂದ್ರಗೌಡ, ಸಲಹೆಗಾರ ತಿಮ್ಮೇನಹಳ್ಳಿ ಚಂದಪ್ಪ ಇವರನ್ನು ನೇಮಕ ಮಾಡಲಾಯಿತು.

error: Content is protected !!