ಹರಪನಹಳ್ಳಿ, ಫೆ. 2- ತಾಲ್ಲೂಕಿನ ಅಡವಿಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಮುಮ್ತಾಜ್ ಬೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾ.ಪಂ. ಇಓ ಪ್ರಕಾಶ್ ಘೋಷಣೆ ಮಾಡಿದ್ದಾರೆ. ಹೊಂಬಳಗಟ್ಟಿ ಗ್ರಾಮದ ಮುಮ್ತಾಜ್ ಬೀ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಹೊಂಬಳಗಟ್ಟಿ ಗ್ರಾಮದ ವಜೀರಾಬಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಫಕ್ಕೀರಪ್ಪ, ಸದಸ್ಯರಾದ ಕೊಟ್ರೇಶ್, ರೇಣುಕಾ ಮಂಜುನಾಥ, ಪಿಡಿಓ ಎಂ.ಕೆ. ರಮೇಶ್, ಕಾರ್ಯದರ್ಶಿ ಜಗದೀಶ್, ವಿಜಯಕುಮಾರ್, ಶ್ರೀಮತಿ ಲಕ್ಷ್ಮೀಕಾಂತ, ಪೂಜಾರ ಪ್ರಸನ್ನ, ತಿಪ್ಪನಹಳ್ಳಿ ತಿಮ್ಮಣ್ಣ, ಆನಂದ ಸೇರಿದಂತೆ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
January 23, 2025