ಹರಿಹರ, ಫೆ.4 – ನಗರದ ಶ್ರೀ ಬಸವೇಶ್ವರ ಕೋ ಆಪರೇಟಿವ್ ಸೊಸೈಟಿಯಲ್ಲಿ ರಾತ್ರಿ ವೇಳೆ ಕಳ್ಳರು ಬಾಗಿಲು ಒಡೆದು ಸುಮಾರು 45,648 ರೂ. ಕಳ್ಳತನ ಮಾಡಿದ್ದಾರೆ. ಎಂದಿನಂತೆ ಇಂದು ಬೆಳಗ್ಗೆ ಸಂಘದ ಕಚೇರಿ ಬಾಗಿಲು ತೆರೆದಾಗಲೇ ಕಳ್ಳತನ ನಡೆದಿರುವ ಬಗ್ಗೆ ಗೊತ್ತಾಗಿದೆ ಎಂದು ಸಂಘದ ಕಾರ್ಯದರ್ಶಿ ವೀರಯ್ಯ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳಾದ ಪಿಎಸ್ಐ ಲತಾ ಪಿ. ತಾಳೇಕರ್, ನಗರ ಠಾಣೆಯ ಪಿಎಸ್ಐ ಸುನಿಲ್ ಬಸವರಾಜ್ ಭೇಟಿ ನೀಡಿ ಪರಿಶೀಲಿಸಿದರು.
March 13, 2025