ದಾವಣಗೆರೆ, ಏ.6- 3 ತಿಂಗಳ ಗರ್ಭಿಣಿಯೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಂದು ನಡೆದಿದೆ.
ರೇಣುಕಾ (24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ತಾನು ಪ್ರೀತಿಸಿದ್ದ ಪ್ರಕಾಶ್ ಎಂಬಾತನೊಂದಿಗೆ ಕಳೆದ 5 ತಿಂಗಳ ಹಿಂದೆ ವಿವಾಹವಾಗಿದ್ದಳು. ಪ್ರೇಮ ವಿವಾಹವಾದ ಮೇಲೆ ತವರು ಮನೆಯವರೊಂದಿಗೆ ಸಂಪರ್ಕ ಕಡಿತವಾಗಿತ್ತು ಎನ್ನಲಾಗಿದೆ. ಯುಗಾದಿ ಹಬ್ಬಕ್ಕೆ ತವರು ಮನೆಗೆ ಹೋಗಬೇಕೆಂಬ ಆಸೆ ಹೊಂದಿದ್ದಳು ಎಂದು ಹೇಳಲಾಗುತ್ತಿದೆ. ಬಾಡಾ ಕ್ರಾಸ್ ಸಮೀಪದ ಆಂಜನೇಯ ಕಾಟನ್ ಮಿಲ್ ಬಳಿಯ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.