ಟೈಲ್ಸ್ ಅಂಗಡಿಯಲ್ಲಿ ಹಾಡಹಗಲೇ ಕಳ್ಳತನ

ದಾವಣಗೆರೆ, ಫೆ.13- ಅಂಗಡಿ ಮಾಲೀಕ ಟೀ ಕುಡಿಯಲು ತೆರಳಿದ್ದಾಗ ಅಪರಿಚಿತ ವ್ಯಕ್ತಿ 10 ಸಾವಿರ ಕಳ್ಳತನ ಮಾಡಿಕೊಂಡು ಹೋದ ಘಟನೆ ನಗರದ ಹದಡಿ ರಸ್ತೆಯಲ್ಲಿರುವ ಟೈಲ್ಸ್ ಅಂಗಡಿಯಲ್ಲಿ ಹಾಡಹಗಲೇ ನಡೆದಿದೆ.

ಭರತ್ ಪೆಟ್ರೋಲ್ ಬಂಕ್ ಎದುರುಗಡೆ ಇರುವ  ಕಲ್ಲೇಶ್ವರ ಟೈಲ್ಸ್ ಗ್ಯಾಲರಿ ಅಂಗಡಿಯಲ್ಲಿ ಮಾಲೀಕ ಟೀ ಕುಡಿಯಲು ಹೊರಗಡೆ ಹೋಗಿದ್ದಾರೆ.

ಸುಮ್ಮನೆ ಅಂಗಡಿಯಲ್ಲಿ ಟೈಲ್ಸ್ ನೋಡುವ ನೆಪದಲ್ಲಿ ಅಂಗಡಿ ಒಳಗೆ ಬಂದ ಅಪರಿಚಿತನು ಅಂಗಡಿಯಲ್ಲಿ ಒಂದು ಸುತ್ತು ಹಾಕಿ ಟೈಲ್ಸ್ ನೋಡುವವನಂತೆ ನಾಟಕವಾಡಿದ್ದಾನೆ. ನಂತರ ಹೊರಗೆ ಬಂದು ಕ್ಯಾಷ್ ಇಡುವ ಟೇಬಲ್‌ನತ್ತ ಬಂದು ಮೆಲ್ಲಗೆ ಕ್ಯಾಷ್ ಡ್ರಾ ಎಳೆದು ನೋಡಿದ್ದಾನೆ. ಆ ವೇಳೆ ಅಲ್ಲಿಯೇ ಇದ್ದ ಹಣದ ಬಂಡಲ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಅಂಗಡಿ ಮಾಲೀಕ ಸುನಿಲ್ ಕುಮಾರ್ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ .

error: Content is protected !!