ರಾಣೇಬೆನ್ನೂರು : ಆಕಸ್ಮಿಕ ಅಗ್ನಿ ಅವಘಡ ; ಕಬ್ಬಿನ ಬೆಳೆ ಭಸ್ಮ

ರಾಣೇಬೆನ್ನೂರು, ಫೆ.13- ನಗರದ ಹೊರ ವಲಯದ ಗಂಗಾಪುರ ರಸ್ತೆಯ ಶನೈಶ್ಚರ  ಮಂದಿರದ ಬಳಿ ರೈತ ಅರುಣಕುಮಾರ ಕೊಪ್ಪದರವರಿಗೆ ಸೇರಿದ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬು, 15 ಕ್ವಿಂಟಾಲ್ ಜೋಳ, ಪೈಪ್, ಬೇವಿನ ಮರ ಸೇರಿದಂತೆ ಲಕ್ಷಾಂತರ ರೂ.ಗಳಷ್ಟು  ಹಾನಿಯಾಗಿದೆ.  ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಮುಂದಾಗುವ ಹೆಚ್ಚಿನ ಅನಾಹುತ ತಪ್ಪಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಹಾನಿಗೊಂಡ ರೈತನಿಗೆ ಶೀಘ್ರವೇ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಗುರುರಾಜ ತಿಳವಳ್ಳಿ ಆಗ್ರಹಿಸಿದರು.

error: Content is protected !!