ದಾವಣಗೆರೆ, ಏ.6- ಕೆಪಿಟಿಸಿಎಲ್ ಕಾಲೋನಿಯ ಬೆಳಕು ಜಾನಪದ ಸಂಸ್ಥೆಯಲ್ಲಿ ಸಿದ್ಧಗಂಗಾ ಮಕ್ಕಳ ಲೋಕದ ವತಿಯಿಂದ ಸಿದ್ಧಗಂಗಾ ಲಿಂ. ಶ್ರೀ ಶಿವಕುಮಾರ ಸ್ವಾಮಿಜೀ ಯವರ ಸ್ಮರಣೋತ್ಸವ ನಡೆಸಲಾಯಿತು.
ಹಿರಿಯ ಕವಿ ಚಿನ್ನಸಮುದ್ರದ ಎನ್. ಪುಟ್ಟಾನಾಯ್ಕ ಅಧ್ಯಕ್ಷತೆ ವಹಿಸಿ ಶ್ರೀಗಳ ಗುಣಗಾನ ಮಾಡಿದರು. ಜಾನಪದ ಅಕಾಡೆಮಿ ಸದಸ್ಯೆ ರುದ್ರಾಕ್ಷಿಬಾಯಿ ಮಕ್ಕಳಿಗೆ ಭಕ್ತಿಗೀತೆ, ಭಾವಗೀತೆ, ವಚನಗಳನ್ನು ಹೇಳಿ ಕೊಟ್ಟರು. ಚಂದ್ರಿಬಾಯಿ, ವೈಷ್ಣವಿ ಮುಖ್ಯ ಅತಿಥಿಗಳಾಗಿದ್ದರು.ಬರವಣಿಗೆ ಸ್ಪರ್ಧೆಯಲ್ಲಿ ಆರಾಧ್ಯ, ಹರಿಕೃಷ್ಣ, ಗಾನಸಿರಿ, ಹೊನ್ನವೀತ, ಚಂದನಾ, ದೇವಿಪ್ರಸಾದ್, ವಿಜಯಲಕ್ಷ್ಮಿ, ವೈಷ್ಣವಿ ಬಹುಮಾನ ಪಡೆದರು.
ಹಿರಿಯ ಸಾಹಿತಿ ಕೆ.ಎನ್. ಸ್ವಾಮಿ, ಅಧ್ಯಕ್ಷ ಪುಟ್ಟನಾಯ್ಕ ಶ್ರೀಗಳ ಗುಣಗಾನ ಮಾಡಿದರು.