ದಾವಣಗೆರೆ, ಏ. 7- ಫೇಸ್ಬುಕ್ನ ‘ಕಾಂಗ್ರೆಸ್ ಕಳ್ಳೆಕಾಯ್’ ಹೆಸರಿನ ಪುಟದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ತೇಜೋವಧೆ ಮಾಡುವಂತಹ ವಿಡಿಯೋ ಹಾಕಿದ್ದು, ವಿಡಿಯೋ ಹಾಕಿರುವವರು ಹಾಗೂ ಅದನ್ನು ಶೇರ್ ಮಾಡಿರುವವರ ವಿರುದ್ಧ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಸಂಚಾಲಕ ಹರೀಶ್ ಕೆ.ಎಲ್.ಬಸಾಪುರ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಸೈಬರ್ ಆರ್ಥಿಕ ಮಾದಕ ವಸ್ತು ನಿಯಂತ್ರಣ ಮತ್ತು ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಹರೀಶ್ ಅವರು ‘ಕಾಂಗ್ರೆಸ್ ಕಳ್ಳೆಕಾಯ್’ ಹೆಸರಿನ ಪುಟದಲ್ಲಿ ವಿಡಿಯೋ ಹಾಕಿರುವವರು ಮತ್ತು ಅದನ್ನು ಶೇರ್ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಮುಖಂಡ ಶ್ರೀಕಾಂತ್ ಬಗೇರ ಮತ್ತಿತರರಿದ್ದರು.