ನಗರದಲ್ಲಿ ನಾಳೆ ವರಸಿದ್ಧಿ ವಿನಾಯಕ ಸ್ವಾಮಿಗೆ ಪಂಚಾಮೃತ ಅಭಿಷೇಕ

ನಗರದಲ್ಲಿ ನಾಳೆ ವರಸಿದ್ಧಿ ವಿನಾಯಕ ಸ್ವಾಮಿಗೆ ಪಂಚಾಮೃತ ಅಭಿಷೇಕ - Janathavaniದಾವಣಗೆರೆ, ಏ.7- ನಗರದ ಗಡಿಯಾರ ಕಂಬದ ಆವರಣದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ 23ನೇ ವಾರ್ಷಿಕೋತ್ಸವ ಸಮಾರಂಭವು ನಾಡಿದ್ದು ದಿನಾಂಕ 9 ರ ಭಾನುವಾರ ನಡೆಯಲಿದೆ.

ಅಂದು ಬೆಳಿಗ್ಗೆ ಶ್ರೀ ವರಸಿದ್ಧಿವಿನಾಯಕ ಸ್ವಾಮಿಗೆ ಪಂಚಾಮೃತ ಅಭಿಷೇಕ, ನವಗ್ರಹ ಹೋಮ, ಮೋದಕದಿಂದ ಶ್ರೀ ಗಣಪತಿ ಹೋಮ, ಶ್ರೀ ಲಕ್ಷ್ಮಿ ಹೋಮ, ಮೃತ್ಯುಂಜಯ ಹೋಮ,  ಶ್ರೀ ಗಣಪತಿಗೆ ಮಹಾ ಮಂಗಳಾರತಿ ನಡೆಯುವುದು. ಮಧ್ಯಾಹ್ನ 12.30 ಕ್ಕೆ ಪೂರ್ಣಾಹುತಿ, ನಂತರ ತೀರ್ಥ ಪ್ರಸಾದ ನಡೆಯಲಿದೆ.

ಸಂಜೆ 6.30 ರ ನಂತರ ಸಂಕಷ್ಟ ಚತುರ್ಥಿ ವ್ರತದ ಪ್ರಯುಕ್ತ ಶ್ರೀ ಗಣಪತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ನಡೆಯಲಿದೆ.

ಪೂಜಾ ಕಾರ್ಯದಲ್ಲಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್‌ ನಾಡಿಗೆರ್‌, ಶ್ರೀ ನಾಗ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಕ್ಷೇತ್ರ ಕಡ್ಲೆಬಾಳು ಇದರ ಪ್ರಧಾನ ಪುರೋಹಿತ ಶ್ರೀಪಾದ ದೇಶಪಾಂಡೆ ಅವರುಗಳು ನಡೆಸಿ ಕೊಡುವರು. ವಿವರಕ್ಕೆ ದೂರವಾಣಿ ಸಂಖ್ಯೆ 9739247703, 9880966696.

error: Content is protected !!