ದಾವಣಗೆರೆ, ಏ. 7- ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗ ಗಳಲ್ಲಿ ಇಂದು ಪೊಲೀಸ್ ಪಥ ಸಂಚಲನ ನಡೆಯಿತು.
ಪಥ ಸಂಚಲನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ, ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಮನಿ, ಕೆ. ಕೃಷ್ಣಮೂರ್ತಿ, ಡಿವೈಎಸ್ಪಿ, ಡಿಎಆರ್ ಮತ್ತು ಸಿ.ಆರ್.ಪಿ.ಎಫ್. ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ನಗರ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಡಿಎಆರ್ ಅಧಿಕಾರಿ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಪಥ ಸಂಚಲನವು ನಗರದ ಅಕ್ತರ್ ರಜಾ ವೃತ್ತದಿಂದ ಆರಂಭಗೊಂಡು, ಮದೀನಾ ಆಟೋ ಸ್ಟ್ಯಾಂಡ್, ಬೇತೂರು ರಸ್ತೆ, ಹಗೇದಿಬ್ಬ ವೃತ್ತ, ದುರ್ಗಾಂಬಿಕ ದೇವಸ್ಥಾನ, ಹೊಂಡದ ವೃತ್ತ, ಜಾಲಿನಗರ, ಕೋರ್ಟ್ ರಸ್ತೆ, ಪಿಬಿ ರಸ್ತೆ, ವಿನೋಬನಗರ 2ನೇ ಮೇನ್, ಚರ್ಚ್ ರಸ್ತೆ ಮೂಲಕ ಡಿಎಆರ್ ಕವಾಯತು ಮೈದಾನದಲ್ಲಿ ಮುಕ್ತಾಯಗೊಂಡಿತು.