ಹೂವಿನಹಡಗಲಿ, ಏ.7- ಶುಕ್ರ ವಾರ ಸಂಜೆ ಸುರಿದ ಗುಡುಗು ಮಿಶ್ರಿತ ಮಳೆಯ ಸಂದರ್ಭದಲ್ಲಿ, ಪಟ್ಟಣದ ಶ್ರೀ ಗವಿಸಿದ್ದೇಶ್ವರ ಶಾಖಾ ಮಠದ ತೆಂಗಿನ ಮರಕ್ಕೆ ಸಿಡಿಲು ಬಡಿದು, ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡು ಜನ ಆಶ್ಚರ್ಯ ಚಕಿತರಾದರು. ಯುಗಾದಿ ಪಾಡ್ಯದ ದಿನ ಸುರಿದ ಮಳೆಯ ನಂತರ ಇದು ಪಟ್ಟಣದಲ್ಲಿ ಬಿದ್ದ ಎರಡನೇ ಮಳೆಯಾಗಿದೆ. ಬಿಸಿಲಿನ ಧಗೆಯಿಂದ ಬಳಲುತ್ತಿದ್ದ ಜನರಿಗೆ ಸ್ವಲ್ಪ ತಂಪಿನ ಅನುಭವವನ್ನೂ ಮೂಡಿಸಿದೆ.
January 12, 2025