ಮಲೇಬೆನ್ನೂರು, ಏ.7- ಭಾನುವಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಇಂದು ಸಂಭ್ರಮದಿಂದ ಜರುಗಿತು.
ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ, ಶ್ರೀ ಬೀರಲಿಂಗೇಶ್ವರ ಸೇರಿದಂತೆ ಗ್ರಾಮದ ಎಲ್ಲಾ ದೇವರುಗಳ ಸಾನ್ನಿಧ್ಯದಲ್ಲಿ ಜರುಗಿದ ರಥೋತ್ಸವಕ್ಕೆ ವಿವಿಧ ಕಲಾ ಮೇಳಗಳು ಮೆರಗು ನೀಡಿದವು. ಭಕ್ತರು ರಥೋತ್ಸವದ ವೇಳೆ ಬಾಳೆಹಣ್ಣು, ಮಂಡಕ್ಕಿ-ಮೆಣಸಿನಕಾಳು ಎಸೆದು ಭಕ್ತಿ ಸಮರ್ಪಿಸಿದರು. ಸಂಜೆ ಓಕಳಿ ನಂತರ ನಡೆದ ದೇವರ ಮುಳ್ಳೋತ್ಸವ ದಲ್ಲೂ ಭಕ್ತರು ಪಾಲ್ಗೊಂಡಿ ದ್ದರು. ಶನಿವಾರ ಭೂತ ಸೇವೆ ನಡೆಯಲಿದೆ.