ಕಷ್ಟಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳಿ: ರೇಖಾ

ಕಷ್ಟಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳಿ: ರೇಖಾ

ದಾವಣಗೆರೆ,ಏ.3- ಮಹಿಳೆ ಮೊದಲು ತಾನು ಅಬಲೆಯಲ್ಲ ಎನ್ನುವುದನ್ನು ಮನದಟ್ಟುಮಾಡಿಕೊಳ್ಳಬೇಕು. ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ನಿಂತು, ಬದುಕು ಕಟ್ಟಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಸದಸ್ಯೆ ರೇಖಾ ಸುರೇಶ್ ಗಂಡಗಾಳೆ ಹೇಳಿದರು.

ನಗರದ ಶುಭೋದಯ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆ ಮುಖ್ಯಸ್ಥರಾದ ಶಕುಂತಲಾ ಮಾತನಾಡಿ, ಸಂಸಾರದಲ್ಲಿ ವಿರಸಕ್ಕಿಂತ ಹೊಂದಾಣಿಕೆಗೆ ಮೊದಲ ಆದ್ಯತೆ ನೀಡಬೇಕು, ತಾಳ್ಮೆಯಿಂದ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ತಿಳಿಸಿದರು.

ಸಂಸ್ಥೆಯ ವತಿಯಿಂದ ಕೇಂದ್ರದ ನಿವಾಸಿಗಳಿಗೆ, ಮತ್ತವರ ಮಕ್ಕಳಿಗೆ ಬಟ್ಟೆ, ಬಚಪನ್ ಶಾಲೆ ವತಿಯಿಂದ ಪ್ರಾಂಶುಪಾಲ ಚಂದ್ರಚಾರ್   ಮಕ್ಕಳಿಗೆ ಡಿಕ್ಷನರಿಗಳನ್ನು ವಿತರಿಸಿದರು. ಸ್ವಧಾರ್ ಕೇಂದ್ರದ ನೈಬರ್ ಹುಡ್ ಕಮಿಟಿ ಸದಸ್ಯರಾದ ಸರೋಜಮ್ಮ, ಉಮಾ, ಆರೋಗ್ಯ ಇಲಾಖೆ ಆನಂದ ಮೂರ್ತಿ,   ವಿದ್ಯಾನಗರ   ರೋಟರಿ ಸಂಸ್ಥೆ ಅಧ್ಯಕ್ಷ ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!