ಶಿವನಪಾದದಲ್ಲಿ ಇಂದಿನಿಂದ ಜಾತ್ರೋತ್ಸವ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶ್ರೀ ಶಿವನಪಾದ ಕ್ಷೇತ್ರದಲ್ಲಿ   ಇಂದಿನಿಂದ ಇದೇ ದಿನಾಂಕ 6 ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ.

ಇಂದು ಬೆಳಿಗ್ಗೆ 8 ಕ್ಕೆ ಶಿವನಪಾದ ಗ್ರಾಮದ ಮುಖಂಡ ಕೆ.ಜಿ. ಬಸವರಾಜಪ್ಪ ಶಿವ ಧ್ವಜಾರೋಹಣ ನೆರವೇರಿಸಲಿ ದ್ದಾರೆ. ಸಂಜೆ 5 ಗಂಟೆಗೆ ಶ್ರೀ ಸ್ವಾಮಿಯ ಅಭಿಷೇಕ, ಕಂಕಣ ಧಾರಣೆ, ಕಳಸ ಪೂಜೆ, ಶಿವ ನಾಮಾವಳಿ, ಮಹಾಮಂಗ ಳಾರತಿ ನಡೆಯಲಿದೆ. 

ನಾಳೆ ಬುಧವಾರ ಬೆಳಿಗ್ಗೆ 8 ಕ್ಕೆ ಶಿವ ಧ್ವಜಾರೋಹಣ ನಿಜಲಿಂಗಪ್ಪ ಮಾರಯ್ಯ ಅವರಿಂದ ನೆರವೇರಲಿದೆ.  

error: Content is protected !!