ನಗರದಲ್ಲಿ ಇಂದು ಜೇನುಗೂಡು ಮಹಿಳಾ ಸಮಾಜದ ವಾರ್ಷಿಕೋತ್ಸವ

ಸಿದ್ಧವೀರಪ್ಪ ಬಡಾವಣೆಯ ಜೇನುಗೂಡು ಮಹಿಳಾ ಸಮಾಜದ ಮೂರನೇ ವಾರ್ಷಿಕೋತ್ಸವ ಸಮಾರಂಭವು ಸದ್ಯೋಜಾತ ಮಠದಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ.

ಜೇನುಗೂಡು ಮಹಿಳಾ ಸಮಾಜದ ಅಧ್ಯಕ್ಷರಾದ ಸುಜಾತ ನಾಗೇಶ್, ಕಾರ್ಯದರ್ಶಿ ಮಧು ಉಮೇಶ್ ಅಧ್ಯಕ್ಷತೆ ವಹಿಸುವರು.  ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಅತಿಥಿಗಳಾಗಿ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ನಳಿನಿ ಅಚ್ಯುತ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಎಲಿಸವ್ವ ಜಾನಪದ ಕಲಾ ತಂಡದ ಅಧ್ಯಕ್ಷರಾದ ಮೀನಾಕ್ಷಿ ವೆಂಕಟೇಶ್ ಅವರಿಗೆ ಸನ್ಮಾನಿಸಲಾಗುವುದು.

ಮಹಿಳಾ ಸಮಾಜದ ಖಜಾಂಚಿ ವಿದ್ಯಾ ಭಾಸ್ಕರ್, ಸಹ ಕಾರ್ಯದರ್ಶಿ ರೇಖಾ ಸಿದ್ದಲಿಂಗಪ್ಪ, ನಿರ್ದೇಶಕರುಗಳಾದ ಕೊಟ್ರಮ್ಮ ಮುರುಗೇಶ್, ರೂಪಾ ಚನ್ನವೀರಸ್ವಾಮಿ, ವಿಜಯ ವೀರೇಂದ್ರ ಉಪಸ್ಥಿತರಿರುವರು.

error: Content is protected !!