21 ಕ್ಕೆ ವಕೀಲರ ಸಂಘದ ಚುನಾವಣೆ

ದಾವಣಗೆರೆ, ಏ.3- ಸ್ಥಳೀಯ ವಕೀಲರ ಸಂಘದ 2023-24 ಮತ್ತು 2024-25 ನೇ ಸಾಲಿನ ದ್ವೈವಾರ್ಷಿಕ ಸಾಲಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಒಬ್ಬ ಮಹಿಳಾ ಸದಸ್ಯೆ ಸೇರಿ, ಒಟ್ಟು 9 ಜನ ಕಾರ್ಯಕಾರಿ ಸಮಿತಿಯ ಸದಸ್ಯರ ಸ್ಥಾನಗಳಿಗಾಗಿ ಇದೇ ದಿನಾಂಕ 21 ರ ಶುಕ್ರವಾರ ಚುನಾವಣೆ ನಿಗದಿಯಾಗಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವ ದಾವಣಗೆರೆ ವಕೀಲರ ಸಂಘದ ಆಜೀವ ಸದಸ್ಯರು ಇಂದಿನಿಂದ ಇದೇ ದಿನಾಂಕ 11 ರೊಳಗೆ  ಅರ್ಜಿಯನ್ನು ಪಡೆದು ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಲ್. ದಯಾನಂದ ತಿಳಿಸಿದ್ದಾರೆ.

error: Content is protected !!