ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕಿಗೆ 10.5 ಕೋಟಿ ಲಾಭ

ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕಿಗೆ 10.5 ಕೋಟಿ ಲಾಭ - Janathavaniದಾವಣಗೆರೆ, ಏ. 1 – ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳ ಲ್ಲೊಂದಾದ ದಾವಣ ಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ 2023 ಮಾರ್ಚ್ ಅಂತ್ಯಕ್ಕೆ ರೂ. 10.50 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್‌ ತಿಳಿಸಿದ್ದಾರೆ.

ಆದಾಯ ತೆರಿಗೆ ರೂ.1.90 ಕೋಟಿ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ ನಿವ್ವಳ ಲಾಭ. ರೂ.5.52 ಕೋಟಿ ಗಳಿಸಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ಗಣನೀಯವಾಗಿ ಅಭಿವೃದ್ಧಿ ಪಥದಲ್ಲಿ ಮುಂದುವರೆದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ವರ್ಷ 2022-2023ನೇ ಸಾಲು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತಮ್ಮ ಬ್ಯಾಂಕಿನ ಪ್ರಗತಿ ಕುರಿತಂತೆ ಬ್ಯಾಂಕಿನ ಸಭಾಂಗಣದಲ್ಲಿ ಇಂದು ಏರ್ಪಡಾಗಿದ್ದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕಿನ ಷೇರು ಬಂಡವಾಳ ರೂ.5.53 ಕೋಟಿ, ಕಾಯ್ದಿಟ್ಟ ಮತ್ತು ಇತರೆ ನಿಧಿಗಳು ರೂ.55.71 ಕೋಟಿ, ಒಟ್ಟು ಠೇವಣಿ ರೂ.320.59 ಕೋಟಿ ಸಂಗ್ರಹಿಸಿದ್ದು, ಸಾಲ ಮತ್ತು ಮುಂಗಡಗಳು ರೂ.262.09 ಕೋಟಿ ನೀಡಲಾಗಿದೆ. ಬ್ಯಾಂಕಿನ ಈ ಸಾಧನೆಗೆ ಗ್ರಾಹಕರ, ಸದಸ್ಯರ ಮತ್ತು ಕಾರ್ಯಕಾರಿ ಮಂಡಲಿ ಸದಸ್ಯರ ಸಲಹೆ, ಸಹಕಾರ ಮತ್ತು ಸಿಬ್ಬಂದಿ ವರ್ಗದವರ ಹೆಚ್ಚಿನ ಪರಿಶ್ರಮ ಕಾರಣ ಎಂದು ಅವರು ಹೇಳಿದ್ದಾರೆ.

ಬ್ಯಾಂಕಿನ ಸದಸ್ಯರುಗಳಿಗೆ `ಆರಾಧ್ಯ ಆಯುಷ್ಮಾನ್ ನಿಧಿ’ ಸ್ಥಾಪಿಸಿದ್ದು, ಈ ನಿಧಿಯಿಂದ ಸದಸ್ಯರಿಗೆ ಚಿಕಿತ್ಸಾ ವೆಚ್ಚ ನೀಡಲಾಗುತ್ತಿದ್ದು, ಸದರಿ ಸಾಲಿನಲ್ಲಿ 98 ಸದಸ್ಯ ಫಲಾನುಭವಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ವೆಚ್ಚ ಒಟ್ಟು ರೂ. 12,27,560ಗಳನ್ನು ಸಂಬಂಧಪಟ್ಟ ಆಸ್ಪತ್ರೆಗಳಿಗೆ ನೇರವಾಗಿ ಪಾವತಿಸಲಾಗಿದೆ. 

ಮೃತಪಟ್ಟ 115 ಸದಸ್ಯರ ವಾರಸುದಾರರಿಗೆ ಮರಣೋತ್ತರ ನಿಧಿ ರೂ.11,37,000ಗಳನ್ನು ಪಾವತಿಸಲಾಗಿದೆ. ಬ್ಯಾಂಕಿನ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರಿಗೆ ಗ್ರೂಪ್ ಹೆಲ್ತ್ ಇನ್ಸೂರೆನ್ಸ್ ಮಾಡಿಸಲಾಗಿದೆ. ನಮ್ಮ ಬ್ಯಾಂಕಿನ ಸದಸ್ಯರ, ಗ್ರಾಹಕರ ಅನುಕೂಲಕ್ಕಾಗಿ ಈಗಾಗಲೇ ಎ.ಟಿ.ಎಂ. ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. 

ಆಡಳಿತ ಕಛೇರಿಯ ಮುಂಭಾಗದಲ್ಲಿ ಮತ್ತು ಹರಿಹರ ಶಾಖೆಯ ಮುಂಭಾಗದಲ್ಲಿ ಎ.ಟಿ.ಎಂ. ಯಂತ್ರಗಳನ್ನು ಅಳವಡಿಸಿ, ಚಾಲನೆಗೊಳಿಸಲಾಗಿದೆ. ಬ್ಯಾಂಕಿಂಗ್ ವ್ಯವಹಾರವನ್ನು ಡಿಜಿಟಲೈಜ್ ಮಾಡುವ ಉದ್ದೇಶಹೊಂದಿ, ಮೊಬೈಲ್ ಬ್ಯಾಂಕಿಂಗ್, ಎನ್ಎಸಿಹೆಚ್, ಐಎಂಪಿಎಸ್ ಮತ್ತು ಯುಪಿಐ ಸೌಲಭ್ಯಗಳ ಪ್ರಾಯೋಗಿಕ ಹಂತ ಮುಗಿದಿದ್ದು, ಅತೀ ಶೀಘ್ರದಲ್ಲಿ ನಮ್ಮ ಗ್ರಾಹಕರುಗಳಿಗೆ ಸೇವೆಗೆ ಅವಕಾಶ ಕಲ್ಪಿಸಲಾಗುವುದು. 

ಆಡಳಿತ ಕಛೇರಿ, ಸಿಒಎಂ ಶಾಖೆ, ಎಂಸಿಸಿ ‘ಬಿ’ ಬ್ಲಾಕ್ ಮತ್ತು ಹರಿಹರ ಶಾಖೆಗಳ ಒಳಾಂಗಣವನ್ನು ಇತ್ತೀಚಿನ ಆಧುನಿಕತೆಗೆ ತಕ್ಕಂತೆ ನವೀಕರಿಸಲಾಗಿದೆ. ಬ್ಯಾಂಕಿನ ಆಡಳಿತ ಕಛೇರಿಯ ಮೇಲ್ಬಾಗದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗಿದೆ. ಇದರಿಂದ ಬ್ಯಾಂಕು ತನ್ನದೇ ಆದ ವಿದ್ಯುತ್ ಉತ್ಪಾದನಾ ಘಟಕದಿಂದಾಗಿ ವಿದ್ಯುಚ್ಛಕ್ತಿ ವೆಚ್ಚವನ್ನು ಕಡಿತಗೊಳಿಸಿದಂತಾಗಿದೆ. ಇದೇ ರೀತಿಯಲ್ಲಿ ನಮ್ಮ ಹರಿಹರ ಶಾಖೆಯ ಕಟ್ಟಡದ ಮೇಲ್ಬಾಗದಲ್ಲಿಯೂ ಸಹ ಸೌರ ವಿದ್ಯುತ್ ಉತ್ಪಾದನಾ ಘಟಕದ ಸ್ಥಾಪನೆಯ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ. ವೀರಣ್ಣ, ವ್ಯವಸ್ಥಾಪನಾ ಮಂಡಲಿಯ ಅಧ್ಯಕ್ಷರೂ ಆದ ಹಾಲಿ ನಿರ್ದೇಶಕ ಎ.ಹೆಚ್. ಕುಬೇರಪ್ಪ, ನಿರ್ದೇಶಕರುಗಳಾದ ರಮಣ್‌ಲಾಲ್ ಪಿ. ಸಂಘವಿ, ಕಿರುವಾಡಿ ವಿ. ಸೋಮಶೇಖರ್, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶಂಕರ್ ಖಟಾವ್‌ಕರ್, ಎಸ್.ಕೆ. ಪ್ರಭು ಪ್ರಸಾದ್, ಶ್ರೀಮತಿ ಶಶಿಕಲಾ ರುದ್ರಯ್ಯ, ಕೆ.ಎಂ. ಜ್ಯೋತಿ ಪ್ರಕಾಶ್, ಪಿ.ಹೆಚ್. ವೆಂಕಪ್ಪ, ಬಿ. ನಾಗೇಂದ್ರಚಾರಿ, ಶ್ರೀಮತಿ ಅನಿಲಾ ಇಂಧುದರ್ ನಿಶಾನಿಮಠ್, ಶ್ರೀಮತಿ ಉಮಾ ವಾಗೀಶ್, ಆರ್.ವಿ. ಶಿರಸಾಲಿಮಠ್, ಕಿರಣ್ ಶೆಟ್ಟಿ,  ವಿಶೇಷ ಆಹ್ವಾನಿತರಾದ ಜಿ.ಕೆ. ವೀರಣ್ಣ, ಕೆ.ಹೆಚ್. ಶಿವಯೋಗಪ್ಪ, ಮತ್ತು ವ್ಯವಸ್ಥಾಪನಾ ಮಂಡಲಿಯ ಸದಸ್ಯರಾದ ಕೆ.ಎಂ. ಬಸವರಾಜ್, ಶ್ರೀಮತಿ ಜೆ.ಸಿ. ವಸುಂಧರ, ಶ್ರೀಮತಿ ಕೆ.ಎಂ. ಶೈಲಾ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗಸ್ವಾಮಿ ಉಪಸ್ಥಿತರಿದ್ದರು.

error: Content is protected !!