ಇ-ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಅಭಿಯಾನ

ದಾವಣಗೆರೆ, ಏ. 1- ನಗರದ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನಲ್ಲಿ ಟಾಟಾ ಕ್ರೋಮಾ ಎಂಟರ್‌ಪ್ರೈಸಸ್ ಸಹಯೋಗದೊಂದಿಗೆ ಈಚೆಗೆ ಇ-ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಅಭಿಯಾನ ಆರಂಭಿಸಲಾಯಿತು.

ಕಾಲೇಜಿನ ನಿರ್ದೇಶಕ ಡಾ. ವಸುಂಧರ ಶಿವಣ್ಣ ಕಾರ್ಯಕ್ರಮ ಉದ್ಘಾಟಿಸಿ, ಇ-ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯ ಪ್ರಾಮುಖ್ಯತೆ ತಿಳಿಸಿದರು.

ಟಾಟಾ ಕ್ರೋಮಾ ಎಂಟರ್‌ಪ್ರೈಸಸ್ ಸ್ಟೋರ್ ಅಸಿಸ್ಟೆಂಟ್ ಮ್ಯಾನೇಜರ್ ಸಿ. ದೀಪು ಮಾತನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಶೋಭಾ ಪ್ರಕಾಶ್, ಡಾ. ವಿ.ಹೆಚ್. ಸುಶಾಂತ್ ಉಪಸ್ಥಿತರಿದ್ದರು.

error: Content is protected !!