ಕನ್ನಿಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್‌ಗೆ 6.3 ಕೋಟಿ ರೂ. ಲಾಭ

ಕನ್ನಿಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್‌ಗೆ 6.3 ಕೋಟಿ ರೂ. ಲಾಭ - Janathavaniಬ್ಯಾಂಕ್ ಅಧ್ಯಕ್ಷ ಆರ್.ಜಿ. ಶ್ರೀನಿವಾಸ ಮೂರ್ತಿ ಹರ್ಷ

ದಾವಣಗೆರೆ, ಏ.1-  ನಗರದ  ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್   2023 ಮಾರ್ಚ್ ಅಂತ್ಯಕ್ಕೆ  ಒಟ್ಟು 6.3 ಕೋಟಿ ರೂ.   ಲಾಭ ಗಳಿಸಿದ್ದು, 94.57 ಲಕ್ಷ ರೂ. ಆದಾಯ ತೆರಿಗೆ ಸಂದಾಯ,   ರೂ. 54 ಲಕ್ಷ ರೂ. ಪ್ರವದಾನ ಮಾಡಿದ ನಂತರ  4.60 ಕೋಟಿ ರೂ. ನಿವ್ವಳ ಲಾಭವಾಗಿದೆ  ಎಂದು ಬ್ಯಾಂಕ್ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

ಹಣಕಾಸು ವರ್ಷ 2022-23ನೇ ಸಾಲಿನ ಅಂತ್ಯಕ್ಕೆ ಒಟ್ಟು ಸಾಲ ಮುಂಗಡ ರೂ. 94 ಕೋಟಿ 84 ಲಕ್ಷಗಳಲ್ಲಿ ಒಟ್ಟು ಎನ್.ಪಿ.ಎ ಪ್ರಮಾಣ ಶೇ.1.92 ಇರುತ್ತದೆ. ಬ್ಯಾಂಕಿನ ರಿಸರ್ವ್ ಫಾರ್ ಬ್ಯಾಡ್ ಅಂಡ್ ಡೌಟ್‍ಫುಲ್ ಡೆಟ್ಸ್ ಖಾತೆಯಲ್ಲಿ ರೂ. 3 ಕೋಟಿ 67 ಲಕ್ಷಗಳಿರುವುದರಿಂದ ನಿವ್ವಳ ಎನ್.ಪಿ.ಎ. ಶೇಕಡ ಪ್ರಮಾಣವು ‘ಶೂನ್ಯ’ವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. 

ನೂತನ ವರ್ಷ ಶೋಭಕೃತ್ ನಾಮ ಸಂವತ್ಸರದ ವಿಶೇಷ ಆಕರ್ಷಣೆಯಾಗಿ 3 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರ ಠೇವಣಿಗಳಿಗೆ ಹಾಗೂ ರೂ.25 ಲಕ್ಷ ಮೇಲ್ಪಟ್ಟ ದೊಡ್ಡ ಠೇವಣಿಗಳಿಗೆ ಶೇ.8.75ರ ಬಡ್ಡಿಯನ್ನು ಹಾಗೂ ಸಾಮಾನ್ಯ ಠೇವಣಿದಾರರಿಗೆ ಶೇ.8.25ರ ಬಡ್ಡಿಯನ್ನು ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಬ್ಯಾಂಕಿನ ಉಪಾಧ್ಯಕ್ಷ  ಕೆ.ವಿ. ಮಂಜುನಾಥ್, ನಿರ್ದೇಶಕರುಗಳಾದ  ಆರ್.ಎಲ್. ಪ್ರಭಾಕರ್, ಕಾಸಲ್ ಎಸ್. ಸತೀಶ್,   ಎನ್. ಕಾಶೀನಾಥ್,   ಕೆ.ಎನ್. ಅನಂತರಾಮ ಶೆಟ್ಟಿ, ಎ.ಎಸ್. ಸತ್ಯನಾರಾಯಣ ಸ್ವಾಮಿ,   ಜೆ. ರವೀಂದ್ರ ಗುಪ್ತ,   ಬಿ.ಎಸ್. ಶಿವಾನಂದ,   ವೈ.ಬಿ. ಸತೀಶ್,   ಬಿ.ಪಿ. ನಾಗಭೂಷಣ್, ಶ್ರೀಮತಿ ಗೀತಾ ಬದ್ರಿನಾಥ್, ಶ್ರೀಮತಿ ಸುಧಾ ನಾಗರಾಜ್, ವೃತ್ತಿಪರ ನಿರ್ದೇಶಕರಾದ   ಜಿ. ಶ್ರೀಧರ್,   ಆರ್. ನಾಗರಾಜ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ   ಪಡಗಲ್  ಪ್ರಶಾಂತ್, ಸಹಾಯಕ ಪ್ರಧಾನ ವ್ಯವಸ್ಥಾಪಕ  ಭೀಮಾನಂದ ಶೆಟ್ಟಿ, ಶಾಖಾ ಮುಖ್ಯಸ್ಥರುಗಳಾದ  ಎಸ್.ಆರ್. ವಿಜಯ್ ಕುಮಾರ್,  ಎನ್. ಪ್ರಸಾದ್,   ಸಂದೇಶ್ ಟೀಕಾ ಹಾಗೂ ಶ್ರೀಮತಿ ನಾಗಜ್ಯೋತಿ ಉಪಸ್ಥಿತರಿದ್ದರು.  

error: Content is protected !!