ದಾವಣಗೆರೆ, ಏ.2- ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ವಿಜಯ ಕರ್ನಾಟಕ ನವತಾರೆ ಬ್ಯೂಟಿ ಹಾಗೂ ಫಿಟ್‌ನೆಸ್ ಸ್ಪರ್ಧೆಯ ಐದನೇ ಆವೃತ್ತಿಯಲ್ಲಿ ಪ್ರಥಮ ರನ್ನರ್‌ಅಪ್ ಸೃಜನಾ ವೀರೇಂದ್ರಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಸೃಜನಾ ಅವರು ಜನವರಿ 2023ರಲ್ಲಿ ನಗರ ದಲ್ಲಿ ನಡೆದ ಚಿಕ್ಕಮಗ ಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನೊ ಳಗೊಂಡ ಪ್ರಾದೇಶಿಕ ಸುತ್ತಿನಲ್ಲಿಯೂ ಪ್ರಥಮಳಾಗಿ ಆಯ್ಕೆಗೊಂ ಡಿದ್ದರು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 21 ಕಾಲೇಜು ಯುವತಿಯರು ಭಾಗವಹಿಸಿದ್ದರು. ಸೃಜನಾ ವೀರೇಂದ್ರಕುಮಾರ್ ಅವರು ನಗರದ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಪದವಿ ಓದುತ್ತಿದ್ದಾರೆ. ಸೃಜನಾ ಅವರು ಜೆಜೆಎಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ಪ್ರಾಧ್ಯಾಪಕ ಡಾ. ವೀರೇಂದ್ರಕುಮಾರ್ ಮತ್ತು ಶ್ರೀಮತಿ ಸುಮ ದಂಪತಿ ಪುತ್ರಿ.