ದಾವಣಗೆರೆ, ಏ.2- ಭಾರತ ಸರ್ಕಾರದ ಸ್ವಚ್ಛ ಟಾಯ್ ಕ್ಯಾಥೋನ್ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಭಾರತೀಯ ಆಟಿಕೆ ಉದ್ಯಮವನ್ನು ಮರು ಚಿಂತನೆ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಕು.ಖುಷಿ ಎಸ್. ಹಾಗೂ ಕು. ರಿಷಾ ಎಸ್. ಇಬ್ಬರೂ ಭಾಗವಹಿಸಿ, ಹಳೆಯ ದಿನಪತ್ರಿಕೆಗಳನ್ನು ಬಳಸಿ ಆಟಿಕೆ ಮಾಡಿ ಬಹುಮಾನ ಪಡೆದ್ದಾರೆ. ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಹೆಲ್ಪ್ಲೈನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಭಾನ್ ಉಪಸ್ಥಿತರಿದ್ದರು.
January 11, 2025