ಕೂಡು ಕುಟುಂಬಗಳ ಕಣ್ಮರೆ ವಿಷಾದದ ಸಂಗತಿ : ಶಾಂತಾ ಭಟ್

ಕೂಡು ಕುಟುಂಬಗಳ ಕಣ್ಮರೆ ವಿಷಾದದ ಸಂಗತಿ : ಶಾಂತಾ ಭಟ್

ದಾವಣಗೆರೆ, ಏ.2-  ಹಣದ ಆಮಿಷಕ್ಕೆ ಒಳಗಾಗಿ, ಉನ್ನತ ಹುದ್ದೆಗಳ ನಿರೀಕ್ಷೆ, ಹೊರ ದೇಶಗಳಿಗೆ ಹೋಗುವ ಭರಾಟೆಯಲ್ಲಿ ಕೂಡು ಕುಟುಂಬದ ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯಗಳ ಸಂಬಂಧಗಳು ಮರೆಯಾಗು ತ್ತಿರುವುದು ವಿಷಾದದ ಸಂಗತಿ ಎಂದು ನಗರದ ಸ್ತ್ರೀರೋಗ ತಜ್ಞರೂ, ಹಿರಿಯ ಪರಿಸರ ವಾದಿಯೂ ಆದ ಡಾ. ಶಾಂತಾ ಭಟ್ ಹೇಳಿದರು.

ನಗರದ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ  ರೋಟರಿ ಬಾಲಭವನದಲ್ಲಿ  ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ  `ದಾವಣ ಗೆರೆ  ಗೃಹಿಣಿ ‘ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು  ಮಾತನಾಡಿದರು.

ಆಧುನಿಕ ತಂತ್ರಜ್ಞಾನದ ಅನುಕರಣೆ ನಮ್ಮ ಕುಟುಂಬಗಳ ಮುಂದಿನ ಪೀಳಿಗೆಗಳಿಗೆ ಮಾರಕವಾಗುತ್ತದೆ. ಸಾಮಾಜಿಕ ಕಾಳಜಿಯ ಸಮಾಜ ಸೇವೆಯೊಂದಿಗೆ ಕೂಡು ಕುಟುಂಬದ ತೃಪ್ತಿ ಮಹಿಳೆಯರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂಬ ಕಳಕಳಿ ವ್ಯಕ್ತಪಡಿಸಿದರು.  

‘ಏಕಲವ್ಯ’ ರಾಜ್ಯ ಪ್ರಶಸ್ತಿ ಪುರಸ್ಕೃತರೂ  ಆದ  ಪಿ.ಎಸ್.ಐ.  ಕೆ.ಎಸ್.ಶೈಲಜಾ   ಮಾತನಾಡಿ,   ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ವಾಹನ ಚಲಾಯಿಸುತ್ತಿದ್ದಾರೆ.   18 ವರ್ಷದ ಒಳಗಿನ ಮಕ್ಕಳು ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿದಾಗ ಅದರ ಶಿಕ್ಷೆ ಪೋಷಕರಿಗೆ  ಆಗುತ್ತದೆ  ಎಂದು ಕಾನೂನು ಶಿಸ್ತಿನ ಬಗ್ಗೆ ವಿವರಿಸಿದರು.

ಏಜು ಏಷ್ಯಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀಮತಿ ನೀಲಮ್ಮ ಸಂಗನಬಸಪ್ಪ ಮಾಗಾನಹಳ್ಳಿ ಅವರು ಮಾತನಾಡಿ, `ಮಹಿಳೆಯರು ಜೀವನದ ಕಷ್ಟ ಕಾರ್ಪಣ್ಯಗಳನ್ನು ತಾಳ್ಮೆಯಿಂದ ಎದುರಿಸಿ, ಕೆಚ್ಚೆದೆಯಿಂದ ಧೈರ್ಯವಾಗಿ ಮುನ್ನಡೆದರೆ ಸಾಧನೆಗಳ ಹಾದಿ ಸುಗಮವಾಗುತ್ತದೆ’ ಎಂದರು.

ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕಿ  ಜ್ಯೋತಿ ಗಣೇಶ್ ಶೆಣೈ ಅಧ್ಯ ಕ್ಷತೆ ವಹಿಸಿದ್ದರು.   ಹೇಮಾ ಶಾಂತಪ್ಪ ಪೂಜಾರಿ,    ವಸಂತಿ ಮಂಜು ನಾಥ್,  ಪರ್ವಿನ್ ಅಮೀರ್‍ಜಾನ್,   ಲಲಿತಾ ಕಲ್ಲೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.   

ಜಯಲಕ್ಷ್ಮಿ ಮಲ್ಲನಗೌಡ್ರು – ಉಮಾ ನಾಗರಾಜ್‍ ಪ್ರಾರ್ಥಿಸಿದರು.   ಪುಷ್ಪಾ ಮಂಜುನಾಥ್ ಸ್ವಾಗತಿಸಿದರು.  ಶೈಲಾ ವಿನೋದ್ ದೇವರಾಜ್ ವಂದಿಸಿದರು.

error: Content is protected !!