ಅಸಹಾಯಕರಿಗೆ `ವಾತ್ಸಲ್ಯ’ ಕಿಟ್‌

ಅಸಹಾಯಕರಿಗೆ `ವಾತ್ಸಲ್ಯ’ ಕಿಟ್‌

ಜಿಗಳಿಯಲ್ಲಿ ವಾತ್ಸಲ್ಯ ಕಿಟ್‌ ವಿತರಣೆಯಲ್ಲಿ ನಾಗನಾಳ್‌ ಹೇಳಿಕೆ

ಮಲೇಬೆನ್ನೂರು, ಮಾ.23- ಜಿಗಳಿ ಗ್ರಾಮದ ಮೂವರು ಅಸಹಾಯಕ ಮಹಿಳೆೆಯರಿಗೆ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ `ವಾತ್ಸಲ್ಯ’ ಕಿಟ್‌ಗಳನ್ನು ಯೋಜನೆಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್‌ ನಾಗನಾಳ್‌ ವಿತರಿಸಿದರು. 

ಈ ವೇಳೆ ಮಾತನಾಡಿದ ಅವರು, ಯುಗಾದಿ ಹಬ್ಬದ ಅಂಗವಾಗಿ ರಾಜ್ಯದ 16 ಸಾವಿರ ಮತ್ತು ದಾವಣಗೆರೆ ಜಿಲ್ಲೆಯ 550 ಹಾಗೂ ಮಲೇಬೆನ್ನೂರು ಯೋಜನಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ 68 ಕಡು ಬಡವರಿಗೆ ಬಟ್ಟೆ ಸೇರಿದಂತೆ, ಗೃಹ ಬಳಕೆಯ ಅಗತ್ಯ ವಸ್ತುಗಳನ್ನು ಒಳಗೊಂಡ `ವಾತ್ಸಲ್ಯ’ ಕಿಟ್‌ಗಳನ್ನು ವಿತರಿಸುತ್ತಿದ್ದೇವೆ. ಅಲ್ಲದೆ, ಇಂತಹ ಜನರಿಗೆ ಪ್ರತಿ ತಿಂಗಳು 1 ಸಾವಿರ ರೂ. ಮಾಸಾಶನವನ್ನು ನೀಡುತ್ತೇವೆ ಎಂದು ನಾಗನಾಳ್‌ ತಿಳಿಸಿದರು. 

ಮಲೇಬೆನ್ನೂರು ಯೋಜನಾಧಿಕಾರಿ ವಸಂತ್‌ ದೇವಾಡಿಗ, ಜಿಗಳಿ ವಲಯ ಮೇಲ್ವಿಚಾರಕಿ ಶ್ರೀಮತಿ ಪದ್ಮಾವತಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ರಕ್ಷಿತಾ, ಸೇವಾ ಪ್ರತಿನಿಧಿ ಮಮತಾ, ಒಕ್ಕೂಟದ ಅಧ್ಯಕ್ಷ ನಾಗಸನಹಳ್ಳಿ ಬಸವರಾಜ್, ಪತ್ರಕರ್ತ ಪ್ರಕಾಶ್‌ ಈ ವೇಳೆ ಹಾಜರಿದ್ದರು.

error: Content is protected !!