ದಾವಣಗೆರೆ, ಮಾ.23-ವಿದ್ಯಾನಗರ ಮತ್ತು ಕೆಟಿಜೆ ನಗರ ಪೊಲೀಸ್ ಠಾಣೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಅಂತರ ಜಿಲ್ಲಾ ಮನೆ ಕಳ್ಳತನ ಆರೋಪಿಗಳನ್ನು ಬಂಧಿಸಿ, ಸುಮಾರು 4.75 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಯಶವಂತಪುರದ ಶ್ರೀನಿವಾಸ ಅಲಿಯಾಸ್ ಕರಾಟೆ ಸೀನಾ, ಚಕ್ರನಗರದ ವೆಂಕಟೇಶ್ ಅಲಿಯಾಸ್ ವೆಂಕಿ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಇವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಯಶಸ್ವಿಯಾದ ತನಿಖಾ ತಂಡದ ಪ್ರಭಾವತಿ ಸಿ. ಶೇತಸನದಿ, ಯು.ಜಿ. ಶಶಿಧರ, ಎಂ.ಎಸ್.ದೊಡ್ಡಮನಿ, ಜಿ.ಎಂ. ರೇಣುಕಾ, ವಿಶ್ವನಾಥ್, ಎಸ್.ಎಸ್. ಕಾಟೆ, ಮಂಜುನಾಥ ಕಲ್ಲದೇವರು, ತಿಪ್ಪೇಸ್ವಾಮಿ, ಆನಂದ ಮುಂದಲಮನಿ, ಗೋಪಿನಾಥ್, ಮಂಜಪ್ಪ, ಯೋಗೀಶ್, ಭೋಜಪ್ಪ, ಮಂಜುನಾಥ್, ಪ್ರಕಾಶ್, ಶಂಕರ್ ಜಾಧವ್, ತಿಮ್ಮಣ್ಣ, ಶಿವರಾಜ್, ಮಂಜುನಾಥ್, ಷಣ್ಮುಖ, ಅಕ್ಬರ್, ನಾಗರಾಜ್, ಮಾರುತಿ, ವೀರೇಶ್, ರಾಮಚಂದ್ರಪ್ಪ ಇವರನ್ನು ಎಸ್ಪಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಶ್ಲಾಘಿಸಿದ್ದಾರೆ.