ದೇವರಗುಡ್ಡದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ

ರಾಣೇಬೆನ್ನೂರು  – ತಾಲ್ಲೂಕಿನ ದೇವರಗುಡ್ಡ ಗ್ರಾಮದ ಶ್ರೀ ರಣದಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕುರುಬರ ಮಾಳಮ್ಮದೇವಿ ಭಜನಾ ಸಂಘ, ಮರಿಯಮ್ಮ ದೇವಿ ಭಜನಾ ಸಂಘ ಹಾಗೂ ಯುವಕ ಬಳಗದ ವತಿಯಿಂದ ರಾಜ್ಯಮಟ್ಟದ ಭಜನಾ ಸ್ಪರ್ಧೆಯನ್ನು ಇಂದು ರಾತ್ರಿ 9.30ಕ್ಕೆ ಏರ್ಪಡಿಸಲಾಗಿದೆ.

ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ಟ ಗುರೂಜಿ, ಮುರುಳೀಧರ ಒಡೆಯರ, ನಾಗಪ್ಪಜ್ಜ ಉರ್ಮಿ, ಕರಿಯಪ್ಪಜ್ಜ ಹಕಾರಿ, ಹಾಲಪ್ಪಜ್ಜ ತೋಪಿನ ಸಾನ್ನಿಧ್ಯ
ವಹಿಸುವರು.

ಗ್ರಾ.ಪಂ. ಅಧ್ಯಕ್ಷ ಸುರೇಶ ತಳಗೇರಿ ಸಮಾರಂಭ ಉದ್ಘಾಟಿಸುವರು. ಗ್ರಾಮದ ಮುಖಂಡ ಎಂ.ಎಂ. ಗುಡಗೂರ ಅಧ್ಯಕ್ಷತೆ ವಹಿಸುವರು. ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮುಖಂಡರಾದ ಎಸ್.ಆರ್. ಪಾಟೀಲ, ಎಂ.ಎಸ್. ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಡಿ. ಹಾವನೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

error: Content is protected !!