ದಾವಣಗೆರೆ, ಮಾ. 10- ನಗರದ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಶಿಕ್ಷಕಿ ಶ್ರೀಮತಿ ಜಿ.ಕೆ. ಮಂಗಳ ಭಾವಗೀತೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ ಮಹಿಳೆಯರ ಧೈರ್ಯ, ಸ್ಥೈರ್ಯ, ತಾಳ್ಮೆ, ಸಂಯಮದ ಗುಣಗಳನ್ನು ಹೊಗಳಿದರು.
ಶಿಕ್ಷಕ ಎನ್. ಮೌನೇಶ್ ಮಾತನಾಡಿ, ಮಹಿಳಾ ದಿನಾಚರಣೆಯ ಹಿನ್ನೆಲೆ, ಪ್ರಾಮುಖ್ಯತೆ, ಸಂವಿಧಾನದಿಂದ ಸ್ತ್ರೀಯರಿಗೆ ದೊರೆತಿರುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ ಖಜಾಂಚಿ ಪ್ರವೀಣ್ ಹುಲ್ಲುಮನೆ ಮಹಿಳಾ ದಿನಾಚರಣೆ ಪ್ರಯುಕ್ತ ಶಾಲೆಯ ಮಹಿಳಾ ಸಿಬ್ಬಂದಿಗಳಿಗೆ ಮನರಂಜನಾ ಚಟುವಟಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಸೈಯದ್ ಆರಿಫ್ ಆರ್.ಸ್ವಾಗತಿಸಿದರು. ಸಹ ಶಿಕ್ಷಕ ಎಸ್.ಜಿ. ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರು.