ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಶಿಕ್ಷಕರ ವೃಂದ ಸಂಘಗಳ ಸಹಯೋಗದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರಗಳಲ್ಲಿನ ಸಾಧಕಿಯರಿಗೆ `ಸೇವಾರತ್ನ’ ಪ್ರಶಸ್ತಿ ಪ್ರದಾನ ಹಾಗೂ ಶೈಕ್ಷಣಿಕ ಕಾರ್ಯಾಗಾರ ನಡೆಯಲಿದೆ.
ಡಿಡಿಪಿಐ ಜಿ.ಆರ್. ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಡಯಟ್ ಉಪನಿರ್ದೇಶಕ ಎಸ್. ಗೀತಾ ಅಧ್ಯಕ್ಷತೆ ವಹಿಸಲಿದ್ದಾರೆ. `ಮಹಿಳಾ ಸಬಲೀಕರಣ ಮತ್ತು ಹಕ್ಕುಗಳು’ ಕುರಿತು ಬಿಇಓ ಬಿ.ಎಂ. ದಾರುಕೇಶ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾಲಿಕೆ ಆಯುಕ್ತರಾದ ರೇಣುಕಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಬಿಇಓ ಟಿ. ಅಂಬಣ್ಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಭಾಗವಹಿಸುವರು.
ಹೆಚ್. ಅನಿತಾ (ಪತ್ರಿಕಾ ರಂಗ), ಡಿ.ಕೆ. ಮಾಧವಿ (ಕಲಾ ಕ್ಷೇತ್ರ), ಕೆ.ಎಂ. ವೀರಮ್ಮ (ಕೃಷಿ ಸೇವಾ ಕ್ಷೇತ್ರ), ಜಲಜಾಕ್ಷಿ (ಮಹಿಳಾ ಸೇವಾ ಕ್ಷೇತ್ರ), ಎಸ್.ಬಿ. ಸ್ಫೂರ್ತಿ (ನೃತ್ಯ ಕಲಾ ಕ್ಷೇತ್ರ), ಹೆಚ್.ಎನ್. ಸುಧಾ (ರಂಗಕಲಾ ಕ್ಷೇತ್ರ), ಡಿ.ಎಂ. ಪ್ರತಿಮಾ (ಆರೋಗ್ಯ ಕ್ಷೇತ್ರ), ಶಾಂತಮ್ಮ (ಮಕ್ಕಳ ಕ್ಷೇತ್ರ), ಪಿ.ಬಿ. ಗೀತಾ (ಸಾರಿಗೆ ಕ್ಷೇತ್ರ), ಲತಾ ಎಲ್. ವೆಂಕಟೇಶ್ (ಸಮಾಜ ಸೇವಾ ಕ್ಷೇತ್ರ) ಅವರುಗಳಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.