ಮಲೇಬೆನ್ನೂರು, ಮಾ.10- ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ರಥೋತ್ಸವದ ಅಂಗವಾಗಿ ಸ್ವಾಮಿಯ ಮುಳ್ಳೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಶುಕ್ರವಾರ ಸಂಜೆ ಜರುಗಿತು. ಮೊದಲಿಗೆ ಭೂತಪ್ಪನನ್ನು ಹೊತ್ತ ದಾಸಪ್ಪ, ಮುಳ್ಳು ತುಳಿದು ಮುಳ್ಳೋತ್ಸವಕ್ಕೆ ಚಾಲನೆ ನೀಡಿದರು. ನಂತರ ಹರಕೆ ಹೊತ್ತ ನೂರಾರು ಭಕ್ತರು, ಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು.
ರಾತ್ರಿ ಕಂಕಣ ವಿಸರ್ಜನೆ ನಂತರ ಓಕಳಿ, ಭೂತಗಳ ಮಣೇವು ಸೇವೆ ನಡೆದವು.