ಶ್ರೀ ಹನುಮಂತ ದೇವರ ರಥೋತ್ಸವವು ಇಂದು ಜರುಗಲಿದೆ. ಇಂದು ಬೆಳಿಗ್ಗೆ 8.30ಕ್ಕೆ ಆನೆ ಉತ್ಸವ, ಮಧ್ಯಾಹ್ನ 12ಕ್ಕೆ ಹರಿಸೇವೆ. ಭಕ್ತಾದಿಗಳಿಂದ ಹರಕೆ, ಬಾಯಿ ಬೀಗ, ಕಿವಿ ಚುಚ್ಚುವುದು, ಜವಳ, ದಿಂಡು ಉರುಳು ಸೇವೆ ಸೇರಿದಂತೆ, ವಿವಿಧ ಹರಕೆಗಳು ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಸಂಪ್ರದಾಯದಂತೆ ಸರಳ ರಥೋತ್ಸವ ನೆರವೇರಲಿದೆ. ಇದೇ ದಿನ ತಡರಾತ್ರಿ (ಶುಕ್ರವಾರ ಬೆಳಗಿನ ಜಾವ) ಸ್ವಾಮಿಯ ಮಹಾರಥೋತ್ಸವವು ಶ್ರೀ ಬಸವೇಶ್ವರ ಶ್ರೀ ಬೀರಲಿಂಗೇಶ್ವರ ದೇವರಗಳೊಡಗೊಡಿ ಜರುಗಲಿದೆ. ನಾಳೆ ಶುಕ್ರವಾರ ಬೆಳಿಗ್ಗೆ 10 ರಿಂದ 11.30ರವರೆಗೆ ಸಾಮೂಹಿಕ ವಿವಾಹ ನಡೆಯಲಿದೆ.
November 23, 2024