ದಾವಣಗೆರೆ, ಮಾ.7- ಈವರೆಗೆ ಜೀವಂತ ಪ್ರಮಾಣ ಪತ್ರ ಸಲ್ಲಿಸದ ಮಿಲಿಟರಿ ಪಿಂಚಣಿದಾರರು ಕೂಡಲೇ ಬ್ಯಾಂಕ್ ಅಥವಾ ಆನ್‍ಲೈನ್‍ನಲ್ಲಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಿ ಮಿಲಿಟರಿ ಪಿಂಚಣಿಯನ್ನು ಮುಂದುವರೆಸಿಕೊಳ್ಳಬೇಕಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಕೋರಿದ್ದಾರೆ.
ಸ್ಪರ್ಶ್‍ಗೆ ವರ್ಗಾಹಿಸಲ್ಪಟ್ಟಿರುವ ಮಿಲಿಟರಿ ಪಿಂಚಣಿ / ಮಿಲಿಟರಿ ವಿಧವಾ ಪಿಂಚಣಿದಾರರು ಪ್ರತಿ ವರ್ಷದಂತೆ ನವೆಂಬರ್ ತಿಂಗಳು ಜೀವಂತ ಪ್ರಮಾಣ ಪತ್ರವನ್ನು ಬ್ಯಾಂಕ್ ಅಥವಾ ಆನ್ ಲೈನ್ ಮುಖಾಂತರ ಸಲ್ಲಿಸಲು ಕೋರಲಾಗಿತ್ತಾದರೂ ಬಹು ಸಂಖ್ಯೆಯ ಪಿಂಚಣಿದಾರರು ಈವರೆಗೆ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಿರುವುದಿಲ್ಲವಾದ್ದರಿಂದ ಮುಂದಿನ ದಿನಗಳಲ್ಲಿ ಸದರಿ ಪಿಂಚಣಿಯನ್ನು ನಿಲ್ಲಿಸಲಾಗುವುದು ಎಂದು ಪಿ.ಸಿ.ಡಿ.ಎ ಅಲಹಬಾದ್ ಕಚೇರಿಯಿಂದ ಮಾಹಿತಿಯನ್ನು ನೀಡಿರುತ್ತಾರೆ. ಆದ ಕಾರಣ ತಕ್ಷಣವೇ ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಮಿಲಿಟರಿ ಪಿಂಚಣಿದಾರರಿಗೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಛೇರಿಯ ದೂ. ಸಂ. 08182-220925ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.