ಜಗದ್ಗುರು ರೇಣುಕಾಚಾರ್ಯರು ಧಾರ್ಮಿಕ ಸಂಸ್ಕೃತಿ ಬೋಧಿಸಿದ ಧರ್ಮ ಪುರುಷರು

ಜಗದ್ಗುರು ರೇಣುಕಾಚಾರ್ಯರು ಧಾರ್ಮಿಕ ಸಂಸ್ಕೃತಿ ಬೋಧಿಸಿದ ಧರ್ಮ ಪುರುಷರು - Janathavaniದಾವಣಗೆರೆ, ಮಾ.7- ಜಗದ್ಗುರು ರೇಣುಕಾಚಾರ್ಯ ರು ಧಾರ್ಮಿಕ ಸಂಸ್ಕೃತಿ  ಬೋಧಿಸಿದ ಧರ್ಮ ಪುರುಷರು ಎಂದು ಜಿಲ್ಲಾಧಿಕಾರಿ ಕಾಪಶಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಮನುಷ್ಯನನ್ನು ಸುಸಂಸ್ಕೃತ ನನ್ನಾಗಿಸುವಲ್ಲಿ ಶ್ರೀ ರೇಣುಕಾಚಾರ್ಯರ ಪಾತ್ರ ಪ್ರಮುಖವಾದುದು. ಅವರ ಆದರ್ಶ ಗಳನ್ನು ಪಾಲಿಸ ಬೇಕಿದೆ ಎಂದರು. ಮನುಕುಲದ ಶಾಂತಿಯೇ ಎಲ್ಲಾ ಧರ್ಮಗಳ ಆಶಯವಾಗಿದೆ ಎಂದು ಹೇಳಿದರು.

ಜಿ.ಪಂ. ಸಿಇಓ ಡಾ. ಎ. ಚನ್ನಪ್ಪ ಮಾತನಾಡಿ, ಗುರು ರೇಣುಕಾಚಾರ್ಯರು ಬೋಧಿಸಿದ  ತತ್ವಗಳನ್ನು ನಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸರ್ಕಾರ ಜಯಂತ್ಯೋತ್ಸವ ಘೋಷಣೆ ಮಾಡಿದ ಕಾರಣಕ್ಕೆ ಸೌಲಭ್ಯಗಳ ಬೇಡಿಕೆಗಳನ್ನು ಮಂಡಿಸಬಾರದು ಎಂದು ಹೇಳಿದರು.

ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಮುಂದಿನ ವರ್ಷ ಸಮಾಜದಿಂದ ಅದ್ಧೂರಿಯಾಗಿ ಜಯಂತ್ಯೋತ್ಸವ ಆಚರಿಸಲಾಗುವುದು ಎಂದು ತಿಳಿಸಿದು.

ಸಾಹಿತಿ ಮಳಲಕೆರೆ ಗುರುಮೂರ್ತಿ ಉಪನ್ಯಾಸ ನೀಡಿದರು.

ಎಸ್ಪಿ ಸಿ.ಬಿ. ರಿಷ್ಯಂತ್, ತಹಶೀಲ್ದಾರ್ ಡಾ. ಅಶ್ವತ್ಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮಠದ್, ಸಮಾಜದ ಮುಖಂಡರಾದ ಸಿದ್ಧಲಿಂಗಸ್ವಾಮಿ, ತ್ಯಾವಣಿಗಿ ವೀರಭದ್ರಸ್ವಾಮಿ, ಸಿದ್ದೇಶ್ ಕೋಟೆಹಾಳ್, ಬಲ್ಲೂರು ರವಿಕುಮಾರ್, ಇಂದೂಧರ ನಿಶಾನಿಮಠ, ದ್ರಾಕ್ಷಾಯಣಮ್ಮ ಇತರರಿದ್ದರು.

error: Content is protected !!