ಪಿ.ಬಿ. ರಸ್ತೆಯ ಪಿಸಾಳೆ ಕಾಂಪೌಂಡ್ 3ನೇ ಕ್ರಾಸ್‌ನಲ್ಲಿರುವ ಶ್ರೀ ಗುಳ್ಳಮ್ಮ ದೇವಿ ದೇವಸ್ಥಾನದ 5ನೇ ವರ್ಷದ ವಾರ್ಷಿಕೋತ್ಸವವು ಇಂದು ನಡೆಯಲಿದೆ ಎಂದು ಶ್ರೀ ಶ್ರೀನಿವಾಸ ಸೇವಾ ಸಂಘ ತಿಳಿಸಿದೆ.
ಕಾರ್ಯಕ್ರಮದ ಅಂಗವಾಗಿ ಪ್ರಾತಃಕಾಲ 5 ರಿಂದ ಮಧ್ಯಾಹ್ನ 12.30 ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 5.10 ರಿಂದ ಧ್ವಜಾರೋಹಣ, 6.10 ಕ್ಕೆ ಗಣಪತಿ ಪೂಜೆ ನಂತರ ಪುಣ್ಯಾಹ, ನಂದಿ ಪೂಜೆ, ನವಗ್ರಹ ಪೂಜೆ, ದೇವಿ ಅಭಿಷೇಕ, ಗಣ ಹೋಮ, ನವಗ್ರಹ ಹೋಮ, ದೇವಿ ಹೋಮ ನಡೆಯುವುದು. ಮಧ್ಯಾಹ್ನ 12 ಕ್ಕೆ ಪೂರ್ಣಾಹುತಿ, ನೈವೇದ್ಯ, ಮಹಾಮಂಗಳಾರತಿ ನಡೆಯುವುದು. ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿತರಣೆ ನಡೆಯುವುದು.