ದಾವಣಗೆರೆ, ಮಾ. 4 – ಎಐಸಿಸಿ ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಕರ್ನಾಟಕ ಉಸ್ತು ವಾರಿ ರಣದೀಪ್ ಸಿಂಗ್ ಸುಜೇ ವಾಲಾ ಅವರು ನಾಡಿದ್ದು ದಿನಾಂಕ 6ರ ಸೋಮವಾರ ಮಧ್ಯಾಹ್ನ 2 ಕ್ಕೆ ಪಕ್ಷದ ಮುಖಂಡರು ಹಾಗೂ ಚುನಾವಣಾ ಆಕಾಂಕ್ಷಿಗಳ ಸಭೆ ಯನ್ನು ನಗರದ ಎಂಬಿಎ ಆಡಿಟೋ ರಿಯಂ ನಲ್ಲಿ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎಚ್.ಬಿ ಮಂಜಪ್ಪ ವಹಿಸಿಕೊಳ್ಳಲಿದ್ದಾರೆ. ಸಭೆಯಲ್ಲಿ ಶಾಸಕ ಶಾಮನೂರು ಶಿವಶಂಕ ರಪ್ಪ, ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಉಪಸ್ಥಿತರಿರು ವರು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ ಶೆಟ್ಟಿ ತಿಳಿಸಿದ್ದಾರೆ.
January 23, 2025